ಮುನ್ನೆಚ್ಚರಿಕೆ ವಹಿಸದಿದ್ದಲ್ಲಿ ಅಪಾಯ ತಪ್ಪಿದ್ದಲ್ಲ...

There is no danger if you do not take precautions in kannada


ನಾವು ಕಾಣದ ಮುಂದಿನ ನಿಮಿಷಗಳು ಹೇಗಿರಬಹುದು ಎಂದು ಹೇಳಲಾಗದು, ಕಳೆದ ಎರಡು ವರ್ಷಗಳ ಹಿಂದೆ ನಾವು ಇನ್ನು ಮುಂದಕ್ಕೆ ಕೊರೋನಾ ರೋಗದ ಸಂಕಷ್ಟದಲ್ಲಿ ಬಳಲಲಿದ್ದೇವೆ ಎಂದು ಅರಿತಿರಲಿಲ್ಲ. ಹಾಗೆಯೇ ಇನ್ನು ಮುಂದಕ್ಕೂ ಎಂತಹ ದಿನಗಳು ಬರಲಿವೆ ಎಂದೂ ಹೇಳಲು ಅಸಾಧ್ಯ.

      ಕೊರೋನ ರೋಗದ ಪರಿಣಾಮದಿಂದ ಶಿಕ್ಷಣ ಮೊಟಕುಗೊಳಿಸಬಾರದೆಂದು ಆನ್ಲೈನ್ ತರಗತಿಗಳು ನಡೆಯುತ್ತಿವೆ. ಇದರಿಂದ ವಿದ್ಯಾರ್ಥಿಗಳ ಜೀವನಕ್ಕೆ ದಕ್ಕೆಯುಂಟಾಗುತ್ತಿದೆ.

    ಸೋಶಿಯಲ್ ಮೀಡಿಯಾಗಳನ್ನು ವಿದ್ಯಾರ್ಥಿಗಳು ಅನಗತ್ಯವಾಗಿ ಬಳಸುತ್ತಿದ್ದಾರೆ. ಹೀಗಿರುವಾಗ ವಿದ್ಯಾರ್ಥಿಗಳ ಕಡೆ ಯಾವುದೇ ಜವಬ್ದಾರಿಯನ್ನು ವಹಿಸದ ಪೋಷಕರು ತಮ್ಮ ಮಕ್ಕಳಿಂದ ಕರಾಳ ದಿನಗಳನ್ನು ಕಾಣಲಿದ್ದಾರೆ.

    ಅತಿಯಾದರೆ ಅಮೃತವೂ ವಿಷ ಎಂಬ ಮಾತನ್ನು ಬಹುಷ ಪೋಷಕರು ಮಾರೆತಿರಬಹುದು ಅಲ್ಲವೇ.... ಇಂದು ಮೊಬೈಲ್ ಫೋನ್'ಗಳಿಗೆ ವ್ಯಸನಿಗಳಾದ ಮಕ್ಕಳು ಆತ್ಮಹತ್ಯೆ ಮುಂತಾದ ದುರ್ನಡತೆಗೆ ಮುನ್ನುಗ್ಗುತ್ತಿದ್ದಾರೆ. ಇದರಿಂದ ಒಂದು ಸಮೂಹವೇ ಹಾಳಾಗುತ್ತಿದೆ.

   ಸೋಶಿಯಲ್ ಮೀಡಿಯಾಗಳನ್ನು ದೈನಂದಿನ ಜೀವನದ ಭಾಗವಾಗಿ ನಾವು ಉಪಯೋಗಿಸುತ್ತಿದ್ದೇವೆ. ಹೀಗಿರುವಾಗ ಅದರ ಕುರಿತು ನಾವು ಮುನ್ನೆಚ್ಚರಿಕೆಯನ್ನು ವಹಿಸಬೇಕು.  ಸೋಶಿಯಲ್ ಮೀಡಿಯಗಳನ್ನು ಉಪಯೋಗಿಸುವವನ ಭವಿಷ್ಯವನ್ನು ಸ್ವತಃ ಅವರೇ ಕಾಪಾಡಿಕೊಳ್ಳಬೇಕಾಗಿದೆ.

ಇದಲ್ಲದೆ ಪೋಷಕರು ಮಕ್ಕಳಿಗೆ ಹಿತವಚಬಗಳನ್ನೂ ನೀಡುತ್ತಿರಬೇಕು. ವಿದ್ಯಾರ್ಥಿಗಳಲ್ಲಿ  ಯಾವುದು ಸರಿ ತಪ್ಪು ಎಂಬ ಮನವರಿಕೆ ಮೂಡುವ ತನಕ ಅವರ ಕುರಿತು ಪೋಷಕರು ಸಂಪೂರ್ಣ ಜವಬ್ದಾರರಾಗಿರುತ್ತಾರೆ....

      ಇನ್ನು ನೆಟ್ವರ್ಕ್ ಸಮಸ್ಯೆಯಿಂದ ಹಲವು ವಿದ್ಯಾರ್ಥಿಗಳು ಮರವನ್ನೇರುವ, ಎತ್ತರದ ಪ್ರದೇಶಕ್ಕೆ ಹೋಗಿ ತರಗತಿಗಳನ್ನು ಕೇಳುವ  ಪರಿಸ್ಥಿತಿ ಎದುರಾಗಿದೆ. ಈಗಾಗಲೇ ಹಲವು ವಿದ್ಯಾರ್ಥಿಗಳು ಕಾರಣದಿಂದ ಅಪಘಾತಕ್ಕೊಳಪಟ್ಟು ಗಂಭೀರ ಗಾಯಗೊಂಡದ್ದೂ ಉಂಟು. ಆದ್ದರಿಂದ ಇಂತಹ ಅನಾಹುತಗಳಿಂದ ಪಾರಾಗಲು  ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು....

 

-- Author --

profile-sample1 yasir marodi

Unais Jokatte Student @ Darunnoor Kashipatna

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.