ಕಣ್ಣಿಯತ್ ಅಹ್ಮದ್ ಮುಸ್ಲಿಯಾರ್

 

Kanniyath-Ahmad-Musliyar-in-kannada


ಕಣ್ಣಿಯತ್ ಅಹ್ಮದ್ ಮುಸ್ಲಿಯಾರ್ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧ್ಯಕ್ಷರು, ಜಗತ್ತಿಗೆೇ  ಮಹಾನ್ ವಿದ್ವಾಂಸ ಮೇಧಾವಿಯಾಗಿದ್ದರು. ಜನರಡೆಯಿಂದ ತಲೆಯೆತ್ತಿದ ನವನವೀನ ಮುಬ್ತದೀಗಳು ಹಾಗೂ ಸಲಫಿಗಳ ವಿರುದ್ಧ ಧ್ವನಿಯೆತ್ತಿದ. ಕಣ್ಣಿಯತ್ ಉಸ್ತಾದರು ತಮ್ಮ ಧರ್ಮನಿಷ್ಠೆಯಿಂದ  ಇಸ್ಲಾಮಿಕ್ ನ್ಯಾಯಶಾಸ್ತ್ರದಲ್ಲಿ ಆಜ್ಞೆಗಳು ನೀಡುತ್ತಿದ್ದುದೆಲ್ಲವೂ ಗಮನಾರ್ಹವಾಗಿತ್ತು.


ಆರಂಭಿಕ ಜೀವನ

ಕಣ್ಣಿಯತ್ ಅಹ್ಮದ್ ಮುಸ್ಲಿಯಾರ್ ಅವರು 1900 ಜನವರಿ 17 ರಂದು ಕಣ್ಣಿಯತ್ ಆವರನ್ ಕುಟ್ಟಿ ಮತ್ತು ಖದೀಜಾ ದಂಪತಿಗಳ ಪುತ್ರನಾಗಿ ಜನಿಸಿದರು. ಹತ್ತನೇ ವಯಸ್ಸಿನಲ್ಲಿ ದರ್ಸ್ ಗೆ ಸೇರಿಕೊಂಡರು. ಮಲಯಾಳಂ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಪರಿಣಿತಿ ಹೊಂದಿದರು. ಕುಂಞಿ ಅಹ್ಮದ್ ಹಾಜಿಯವರ ನೇತೃತ್ವದಲ್ಲಿ ಸ್ಥಾಪಿಸಲಾದ ವಾಝಕ್ಕಾಡ್ ದಾರುಲ್ ಉಲೂಮ್‌ನಲ್ಲಿ ಪ್ರವೇಶಾತಿ ಪಡೆದು, ಸಯ್ಯಿದ್ ತ್ವಾಹ ಆಲುವಾಯಿ, ಕುತುಬಿ ಮುಹಮ್ಮದ್ ಮುಸ್ಲಿಯಾರ್, ಚೆರುಶ್ಶೇರಿ ಅಹ್ಮದ್ ಕುಟ್ಟಿ ಮುಸ್ಲಿಯಾರ್ ಹಾಗೂ ಕೆ.ಎಂ.ಮೌಲವಿ, ಚಾಲಿಲಗತ್ ಕುಂಞಹಮ್ಮದ್ ಹಾಜಿ ಇವರುಗಳ ಶಿಶ್ಯತ್ವ ಸ್ವೀಕರಿಸಿದರು. ವೇಲೋರಿ ಅಬ್ದುಲ್ ಅಝೀಝ್ ಅವರು ಸಂಸ್ಥೆಯ ಪ್ರಾಂಶುಪಾಲರಾದ ನಂತರ ಕಣ್ಣಿಯತ್ ಉಸ್ತಾದರು ಅವರಿಂದ ಹದೀಸ್ ಜ್ಞಾನವನ್ನು ಪಡೆದು, ತದನಂತರ ಇಜಾಝತ್ತನ್ನೂ ಪಡೆದರು. ಕಣ್ಣಿಯತ್ ಉಸ್ತಾದರು ಅರೇಬಿಕ್ ಭಾಷೆ, ಜ್ಯೋತಿಶಾಸ್ತ್ರ ಹಾಗೂ ತರ್ಕಶಾಸ್ತ್ರದಲ್ಲಿ ನೌಪುಣ್ಯತೆಯನ್ನು ಪಡೆದರು.


ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಮುಶಾವರಕ್ಕೆ ಕಣ್ಣಿಯತ್ತ್ ಉಸ್ತಾದರನ್ನು ಆಹ್ವಾನಿಸಲಾಯಿತು.  ಅಧ್ಯಕ್ಷರಾಗಿದ್ದ ಸ್ವದಕುತುಲ್ಲಾ ಮುಸ್ಲಿಯಾರ್ ಅವರು ರಾಜೀನಾಮೆ ನೀಡಿದ ನಂತರ ಪಿ.ವಿ.ಮುಹಮ್ಮದ್ ಕೋಯಾ ರವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ 1967, ಮೇ 25 ರಂದು ಸಮಸ್ತದ ಮಹೋನ್ನತ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು.


ಸೇವೆಗಳು

ಕುತುಬಿ ಮುಸ್ಲಿಯಾರ್, ಆಯಂಚೆರ್ ಮುಸ್ಲಿಯಾರ್, ಪಲ್ಲಿಪುರಂ ಅಬ್ದುಲ್ ಖಾದರ್ ಮುಸ್ಲಿಯಾರ್ ಅವರೊಂದಿಗೆ ದಾರುಲ್ ಉಲೂಮ್‌ನಲ್ಲಿ ಹಲವು ವರ್ಷಗಳ ಸುದೀರ್ಘ ಸೇವೆಯ ನಂತರ, ಅವರು ತಲಶ್ಶೇರಿಯ ಓಡತ್ತಿನ್ ಪಳ್ಳಿ, ಮಾಟ್ಟುಲ್ ಮುಹ್ಯದ್ದೀನ್ ಪಳ್ಳಿ, ಪರಂಬತ್ ಪಳ್ಳಿ, ಮೊರಯೂರ್ ಪಳ್ಳಿಯಲ್ಲಿ ಮುಖ್ಯ ಮುದರ್ರಿಸ್(ಪ್ರಾಧ್ಯಾಪಕರಾಗಿ) ನೇಮಕಗೊಂಡರು. ಅವರು ಕೇರಳದ ಮಕ್ಕ ಎಂದು ಕರೆಯಲ್ಪಡುವ ಪೊನ್ನಾನಿ ಕೇಂದ್ರ ಮಸೀದಿಯಲ್ಲಿ ಮುದರ್ರಿಸ್ ಆಗಿ ಸೇವೆ ಸಲ್ಲಿಸಿದರು. ಶಂಸುಲ್ ಉಲಮಾ ಅವರೊಂದಿಗೆ ಜಾಮಿಯಾ ನೂರಿಯಾ ಪಟ್ಟಿಕಾಡ್‌ನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವಧಿಯು ಜಾಮಿಯಾ ನೂರಿಯಾದ ಸುವರ್ಣ ದಿನಗಳಾಗಿತ್ತು.


ಅವರು ತಮ್ಮ ಮೌಖಿಕ ಹಾಗೂ ಲೌಖಿಕ ಆದೇಶಗಳಿಂದ ಸಲಫಿಸಂ ಮತ್ತು ಇತರ ನವನವೀನ ಸಿದ್ಧಾಂತಗಳು ಹಾಗೂ ಬಿದ್ಅತ್ ಗಳ ವಿರುದ್ಧ ಧ್ವನಿಯೆತ್ತುತ್ತಿದ್ದರು. ಅಹ್ಲುಸ್ಸುನ್ನತ್ ವಲ್ ಜಮಾಅತಿನ ಮುಂಚೂಣಿಯಾಗಿದ್ದು, ತಮ್ಮ ಅನುಯಾಯಿಗಳಿಗೆ ಸಮೃದ್ಧ ನಾಯಕ ಹಾಗೂ ಆಶಾಕಿರಣವಾಗಿದ್ದರು. ಕನ್ನಿಯತ್ ಉಸ್ತಾದರು 19 ಸೆಪ್ಟೆಂಬರ್ 1993 (ರಬೀಉಲ್ ಅಖರ್ 2, 1414) ರಂದು ಇಹಲೋಕ ತ್ಯಜಿಸಿದರು. ಧರ್ಮದ ವಿವಿಧ ಕ್ಷೇತ್ರಗಳ ನೂರಾರು ಲಕ್ಷ ಜನರ ಮನಸ್ಸನ್ನು ಗೆದ್ದು ಅಲ್ಲಾಹನ ಆಜ್ಞೆಗಳಿಗೆ ಅನುಸರಿಸಿ ಇಸ್ಲಾಂ ಧರ್ಮಕ್ಕೆ ಬೇಕಾಗಿ ಜೀವನವನ್ನು ಮುಡುಪಾಗಿಟ್ಟರು.





-- Author --

profile-sample1 yasir marodi

A S Mandadi Kannada Writer

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.