ಬಹು ಭಾಷೆಗಳಿಂದ ಅಲಂಕೃತ ಭಾರತ

ಭಾರತವೆಂಬುವುದು ವೈವಿಧ್ಯತೆಗಳು ತುಂಬಿರುವ ದೇಶ.ಹಲವು ಸಂಸ್ಕೃತಿಗಳು ವಿವಿಧ ಭಾಷೆಗಳು ದೇಶದ ಅಲಂಕಾರ.ಭಾರತದ ಪ್ರತಿ ಪ್ರಾಂತ್ಯದಳಲ್ಲಿಯೂ ವಿವಿಧ ಭಾಷೆ ಮಾತಾಡುವ ಜನರನ್ನು ಕಾಣಬಹುದು.ಭಾರತವನ್ನು ಭಾಷೆಗಳ ಮ್ಯೂಸಿಯಂ ಎಂದೂ ಕರೆಯಲಾಗುತ್ತದೆ.ಭಾರತ ದೇಶದಲ್ಲಿ ಒಟ್ಟು 1652 ಭಾಷೆಗಳಿವೆ ಅವುಗಳನ್ನು ಪ್ರಮುಖ ಐದು ಭಾಷೆಗಳಾಗಿ ಆಯ್ದುಕೊಳ್ಳಲಾಗಿದೆ.ಇಂಡೊ-ಆರ್ಯನ್ ಭಾಷೆ, ದ್ರಾವಿಡಿಯನ್ ಭಾಷೆ, ಆಸ್ಟ್ರಿಕ್ ಭಾಷೆ, ಟಿಬೇಟೊ ಬರ್ಮನ್ ಭಾಷೆ ಹಾಗೂ ಯುರೋಪ್ಯ ಭಾಷೆಗಳ ಮೂಲವಾಗಿದೆ ಭಾರತೀಯ ಭಾಷೆಗಳು.

ಬಹು ಭಾಷೆಗಳಿಂದ ಅಲಂಕೃತ ಭಾರತ
Image source: pixabay.com

ದೇಶದ ವೈವಿಧ್ಯತೆಗಳಲ್ಲಿರುವ ಪ್ರಮುಖ ಅಂಶವಾಗದೆ ಭಾಷಾ ವೈವಿಧ್ಯತೆಗಳು. ಭಾರತೀಯ ಸಂವಿಧಾನವು 22 ಭಾಷೆಗಳನ್ನು ಅಧಿಕೃತ ಭಾಷೆಗಳನ್ನಾಗಿ ಪಟ್ಟಿಮಾಡಿದೆ. ಅಸ್ಸಾಮಿ, ಬೆಂಗಾಲಿ, ಬೋಡೊ, ಡೊಗ್ರಿ, ಇಂಗ್ಲೀಷ್, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮೈಥಿಲಿ, ಮಲಯಾಲಂ, ಮರಾಠಿ, ಮೇಟಿ, ನೇಪಾಶಿ, ಓಡಿಯಾ, ಪಂಜಾಬಿ, ಸಂಸ್ಕೃತ, ಸಂತಾಲಿ, ಸಿಂಧಿ, ತಮಿಳು, ತೆಲುಗು, ಉರ್ದು, ಮುಂತಾದ ಭಾಷೆಗಳಿಗೆ ಅಧಿಕೃತ ಭಾಷೆಯಾಗಿ ಅಂಗೀಕರಸಿ ಸಾಹತ್ಯಿಕ ಭಾಷೆಯಾಗಿ ಮಾನ್ಯತೆ ಪಡೆದಿದೆ. ಮಾತ್ರವಲ್ಲದೆ ಉಳಿದ 227 ಇತರ ಭಾಷೆಗಳನ್ನು ಮಾತೃಭಾಷೆಯಾಗಿ ಪರಿಗಣಿಸಲಾಗಿದೆ. ಇದರಲ್ಲಿರುವ ಹಲವು ಭಾಷೆಗಳು ತನ್ನದೇ ಆದ ಲಿಪಿಯನ್ನು ಹೊಂದಿದರೆ, ಇತರ ಭಾಷೆಗಳು ಅಧಿಕೃತ ಲಿಪಿಯನ್ನು ಹೊಂದಿಲ್ಲ. ಕೆಲವು ರಾಜ್ಯಗಳಲ್ಲಿ ಇತರ ಭಾಷೆಗಳನ್ನು ಅಧಿಕೃತವಾಗಿ ಬಳಸುತ್ತಾರೆ.

ಭಾರತದ ಹಲವು ಪ್ರಾಂತ್ಯಗಳಲ್ಲಿ ಹಲವು ಭಾಷೆಗಳನ್ನು ಆಡುತ್ತಾರೆ. ಇತರ ಕೆಲವು ಭಾಷೆಗಳಲ್ಲಿ ಧರ್ಮದ ಆಧಾರದ ಮೇಲೆ ಅವಲಂಬಿತವಾಗಿದೆ. ಆದರೆ ದೇಶದಾದ್ಯಂತ ಅಧಿಕೃತ ಭಾಷೆಗಳ ಪೈಕಿ ಹಿಂದಿ ಭಾಷೆಯನ್ನೇ ಅತಿ ಹೆಚ್ಚಾಗಿ ಬಳಸುತ್ತಾರೆ. ಪ್ರತಿ ಪ್ರಾಂತ್ಯಗಳಲ್ಲಿಯೂ ನಿರ್ದಿಷ್ಟ ಭಾಷೆಯು ಅಂಗೀಕೃತಗೊಂಡಿದ್ದರೂ ಹಿಂದಿ ಭಾಷೆಯೇ ಖ್ಯಾತಿ ಪಡೆದಿದೆ. ಇನ್ನೂ ಲಿಪಿಗಳಿಲ್ಲದ ಹಲವು ಮಾತೃಭಾಷೆಗಳಿದ್ದರು ಅದಕ್ಕೆ ಅನುಗುಣವಾಗಿ ಮಾತನಾಡುವವರಿದ್ದಾರೆ.

ಸಂಸ್ಕೃತಿಕ ವೈವಿಧ್ಯತೆಗಳು:-

ಭಾರತೀಯ ವೈವಿಧ್ಯತೆಗಳಲ್ಲಿ ಇನ್ನೊಂದು ಮುಖ್ಯವಾದ ಅಂಶವಾಗಿದೆ ಸಂಸ್ಕೃತಿಕ ವೈವಿಧ್ಯತೆಗಳು. ನಿರ್ದಿಷ್ಟ ಜನಾಂಗಗಳ ಪ್ರದೇಶಗಳಲ್ಲಿ ಹಲವು ಸಂಸ್ಕಾರಗಳು ರೂಪುಗೊಂಡಿದೆ. ಭಾರತೀಯ ಸಂಸ್ಕೃತಿಗಳು ಕೆಲವು ಪ್ರಾಚೀನ ದೊರೆಗಳ ಪ್ರಭಾವಗಳಿಗೆ ಒಳಗಾಗಿ ಅಂದಿನ ರಾಜರುಗಳು ನಡೆಸಿಕೊಂಡುಬಂದಂತಹ ಅದೇ ಸಂಸ್ಕಾರವು ಇಂದಿಗೂ ಮುಂದುವರಿಯುತ್ತಿದೆ. ಭಾರತದ ವಿವಿಧ ಪ್ರಾಂತ್ಯಗಳಲ್ಲಿಯೂ ಹಲವು ಸಂಸ್ಕಾರಗಳನ್ನು ಕಾಣಲು ಸಾದ್ಯವಿದೆ. ಇಂತಹ ಸಂಸ್ಕಾರಗಳು ಭಾರತೀಯ ಐಕ್ಯತೆಗೆ ಪ್ರೋತ್ಸಾಹ ನೀಡುತ್ತದೆ. ಕೇರಳದ ಸಂಸ್ಕಾರಗಳ ರೂಪೀಕರಣದಲ್ಲಿ ಚೇರರ ಸಾಮ್ರಾಜ್ಯ ಉತ್ತಮ ಪ್ರಭಾವ ಬೀರಿದರೆ, ದಕ್ಷಿಣ ಭಾರತದ ಸಂಸ್ಕಾರದ ರೂಪೀಕರಣಕ್ಕೆ ಪಲ್ಲವರು, ಪಾಂಡ್ಯರು, ವಾಕಕರು, ಚಾಲುಕ್ಯರು, ಚೋಳರ ಕೊಡುಗೆ ಅತೀ ಪ್ರಮುಖ್ಯವಾಗಿದೆ.

ಕರ್ನಾಟಕದ ಅಧಿಕೃತ ಭಾಷೆಯಾಗಿ ಕನ್ನಡ ಭಾಷೆಯನ್ನು ಪರಿಗಣಿಸಲಾಗಿದೆ. ಆದರೆ ಕರ್ನಾಟಕದಾದ್ಯಂತ ಕನ್ನಡಕ್ಕಿಂತ ಇತರ ಭಾಷೆಯನ್ನು ಹೆಚ್ಚಾಗಿ ಬಳಸುವ ಜನರಿದ್ದಾರೆ. ರಾಜ್ಯದ ಅಧಿಕೃತ ಭಾಷೆಯಲ್ಲೇ ನಾವು ಹೆಚ್ಚಾಗಿ ವ್ಯವಹರಿಸಬೇಕು. ಇಂದು ಕರ್ನಾಟಕದ ಹಲವೆಡೆ ಉದ್ಯೋಗಿಗಳು ಹಿಂದಿ ಭಾಷೆಯಲ್ಲೇ ವ್ಯವಹರಿಸುತ್ತಾರೆ. ಇಲ್ಲೆ ಹುಟ್ಟಿ ಬೆಳೆದ ನಾವುಗಳು ನಮ್ಮ ರಾಜ್ಯದ ಭಾಷೆಯಾದ ಕನ್ನಡಕ್ಕೆ ಪ್ರಾಮುಖ್ಯತೆ ನೀಡಬೇಕು. ಸಾರ್ವಜನಿಕ ಪ್ರದೇಶಗಳ ಅಗತ್ಯ ಮಾಹಿತಿಗಳನ್ನು ನೀಡುವ ಸಂದರ್ಭದಲ್ಲಿ ಕನ್ನಡ ಭಾಷೆಯನ್ನೇ ಬಳಸಬೇಕು. ಅಥವಾ ತ್ರಿಭಾಷೆ ಸೂಚಕದಂತೆ ಹಿಂದಿ, ಇಂಗ್ಲೀಷ್ ಮತ್ತು ಕನ್ನಡ ಎಂಬ ಮೂರು ಭಾಷೆಯಲ್ಲಿ ಮಾಹಿತಿ ಪ್ರಕಟಿಸಬೇಕು. ಎಂದಿಗೂ ಕನ್ನಡಿಗರಾಗಿ ಕನ್ನಡವನ್ನೇ ಮಾತನಾಡುವ.

-ಹಾರೂನ್ ರಶೀದ್ ಈಶ್ವರಮಂಗಳ

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.