ಪಠ್ಯ ಪರಿಷ್ಕರಣೆ: ಗೋಬೆಲ್ಸ್ ನಡೆಯ ಪುನರಾವರ್ತನೆಯೇ..?

 

ಜೋಸೆಫ್ ಗೋಬೆಲ್ಸ್ ಹಿಟ್ಲರನ ಪ್ರಮುಖ ಪ್ರಚಾರಕ.ನಾಜಿ ಸಿದ್ಧಾಂತದ ಪ್ರಚಾರದ ರುವಾರಿ.ಅಸಮರ್ಥ ಹಿಟ್ಲರನ್ನು ಸಮರ್ಥನಂತೆ ಬಿಂಬನೆ ಮಾಡುತ್ತಿದ್ದ ಶೂನ್ಯವಾದಿ.ಈತ ಹಿಟ್ಲರನ ಮಿಥ್ಯಬಣ್ಣವನ್ನು ಸತ್ಯವಾಗಿ ಪರಿವರ್ತಿಸಿ ಪುಕ್ಕಟೆ ಪ್ರಚಾರ ನೀಡುತ್ತಿದ್ದನು. ಈ ಮೂಲಕ ಹಿಟ್ಲರನ ನ್ಯೂನತೆಗಳನ್ನು ಸಾಧನೆಗಳಾಗಿ ವೈಭವೀಕರಿಸುತ್ತಿದ್ದನು. 

 

ಹೌದು...ಅದೇ ಗೋಬಲ್ಸ್ ಇತಿಹಾಸವು ಇಂದು ಆವರ್ತನೆಯಾದಂತಿದೆ. ಅಸಮರ್ಥರೆನ್ನುವ ಅರೆಜ್ಞಾನಿಗಳನ್ನು ಅರ್ಹಜ್ಞಾನಿಗಳ ಸ್ಥಾನದಲ್ಲಿ ಕುಳ್ಳಿರಿಸಿ ಸಮರ್ಥರೆನ್ನುವ ಕಹಳೆಯನ್ನು ಜನರೆಡೆಗೆ ಮೊಳಗಿಸಲಾಗುತ್ತಿದೆ.

ಅರ್ಹ ಅಭ್ಯರ್ಥಿಗಳ ಲಭ್ಯತೆಯೆಡೆ ಅಸಮರ್ಥರನ್ನು ಮುನ್ನೆಲೆಗೆ ತಂದು ತಮ್ಮ ವಕ್ರ ಚಿಂತನೆಯನ್ನು ಪಕ್ಕಾ ನಡೆಸಲು ತಯಾರಾಗಿದೆ. ಅದಕ್ಕೆ ಸಣ್ಣ ಪುರಾವೆ ಎಂಬಂತೆ ಮಹಾತ್ಮರಾದ ಗೌತಮ ಬುಧ್ದ ಭಗತ್ ಸಿಂಗ್ ಸರ್ ವಿಶ್ವೇಶ್ವರಯ್ಯ ಸೇರಿದಂತಿಹ ಚೇತನ ಸ್ವರೂಪಿಗಳನ್ನು ಬದಿಗೊತ್ತಿ ಹೆಡ್ಗೆವಾರ್ ಹಾಗು ಸೂಲಿಬೆಲೆಯಂತಹಾ ವಿವಾದಾತ್ಮಕ ವ್ಯಕ್ತಿಗಳನ್ನು ಮಕ್ಕಳಿಗೆ ಮಹಾತ್ಮರಾಗಿ ಪರಿಚಯಿಸಿ ಕೊಡುವ ಪ್ರಯತ್ನಕ್ಕೆ  ಸರ್ಕಾರವು ಕೈ ಹಾಕಿದೆ.

Source: Kannadanewsnow.com

 

ಅರೆಬರೆ ಕಲಿತು ಅಕ್ಷರ ಸಂತರಂತೆ ಮೇಳೈಸುವ ಕೆಲ ಅನ್ಪಡ್ಗಳನ್ನು ಇಂದಿನ ಸರಕಾರವು ಜ್ಞಾನಭಂಡಾರದಂತೆ ಚಿತ್ರೀಕರಿಸಿದೆ. ರೋಹಿತ್ ಚಕ್ರತೀರ್ಥ ಎಂಬ ಫೇಸ್ಬುಕ್ ಟ್ರೋಲರ್ನನ್ನು ಪಠ್ಯ ಪುಸ್ತಕ ಸಮಿತಿಯ ಅಧ್ಯಕ್ಷರಾಗಿ ನೇಮಿಸಿದೆ. ಈತ ಬರೀ ಟ್ರೋಲರ್ ಮಾತ್ರವಲ್ಲ ನಾಡಗೀತೆಯನ್ನು ಅವಮಾನ ಮಾಡಿದ ಅಪರಾಧ ಹೊತ್ತ ವ್ಯಕ್ತಿ.ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ರಾಷ್ಟ್ರಕವಿ ಕುವೆಂಪುರವರ ಕುರಿತು ಅಸಭ್ಯವಾಗಿ ಗೀಚಿದ ಸಂಘನಿಷ್ಠ. ಅದರೂ ಈತನ ಬಗ್ಗೆ ಯಾವುದೇ ಅಗೌರವ ತೋರದ ಸರಕಾರವು ಮಹತ್ವದ ಸ್ಥಾನ ಮತ್ತು ಜವಾಬ್ದಾರಿಯನ್ನು ನೀಡಿ ಅರ್ಹನೆಂದು ಬೀಗುತ್ತಿದೆ 

 

ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಅಧ್ಯಕ್ಷನನ್ನಾಗಿ ನೇಮಿಸಿದಿನಂದಲೂ ಬುಧ್ಧಿಜೀವಿಗಳು , ಪ್ರಗತಿಪರ ಚಿಂತಕರು ಸಾಹಿತಿಗಳೂ ಸೇರಿ ಹಲವರು ಈ ನಿರ್ಧಾರವನ್ನು  ನಕಶಿಖಾಂತವಾಗಿ   ವಿರೋಧಿಸಿದ್ದರು. ಆದರೂ ತನ್ನ ಜಾಡು ಬಿಡದ ಸರಕಾರವು ಕುತ್ಸಿತ ವ್ಯಕ್ತಿಗಳನ್ನು ಪ್ರಖ್ಯಾತಗೊಳಿಸಲು ಗೋಬೆಲ್ಸ್ ನೀತಿಯನ್ನು ಯಾಮಾರಿಸಿದೆ.ಆತನ ಶಿಕ್ಷಾಣಾರ್ಹತೆ ಹಾಗೂ ಯೋಗ್ಯತೆ ಕುರಿತು ಭುಗಿಲೆದ್ದ ವ್ಯಾಪಕ ವಿರೋಧಗಳಿಗೆ ಉತ್ತರಿಸಿದ ಸರಕಾರವು "ಇವನೊಬ್ಬ ಐಐಟಿ ಹಾಗೂ ಸಿಐಟಿ ಆಫೀಸರ್" ಎಂದು ಉತ್ತರಿಸಿ ನಗೆಪಾಟಲೆಗೀಡಾಗಿದೆ. ಈತ ಸಂಘ ಪಾಲನೆಗೆ ಅರ್ಹನೆ ಹೊರತು ವಿದ್ಯಾಲಯ ನಿರ್ವಹಣೆಗಳ್ಳ ಎಂಬೂದು ಈತನ ವಿಧ್ಯಾಭ್ಯಾಸದ ಹಿನ್ನಲೆಯಿಂದ ಕಂಡುಕೊಳ್ಳಬಹುದು.

 

ನಿಜಕ್ಕೂ ಈ ಸರ್ಕಾರದ ನೇರ ಗುರಿ ಕೇಸರೀಕರಣವಾಗಿದೆ. ತನ್ನ    ಅಜೆಂಡಾವನ್ನು ಸಾಕಾರಗೊಳಿಸಲು ಸರ್ವ ಮಜಲುಗಳಲ್ಲಿ ವ್ಯತರಿಕ್ತ ಕುತಂತ್ರಗಳನ್ನು ಪ್ರಯೋಗಿಸುತ್ತಿದೆ. ಬರಗೂರು ರಾಮಚಂದ್ರಪ್ಪರವರ ಸಮಿತಿಯು ರಚಿಸಿದ್ದ ಪಠ್ಯಪುಸ್ತಕಕ್ಕೆ ವಿರೋಧಗಳು ವ್ಯಕ್ತವಾಗಿರಲಿಲ್ಲ ಕಾರಣ ಅರ್ಹರ ಸ್ಥಾನಕ್ಕೆ ಸಮರ್ಥರನ್ನೇ ಆಯ್ಕೆಮಾಡಲಾಗಿತ್ತು. ಆದರೆ ಈಗಿನ ಸಮಿತಿಯು ಪ್ರಸಿಧ್ದ ಕವಿ ಸಾಹಿತಿಗಳ ಸ್ಥಾನಕ್ಕೆ ಖ್ಯಾತ ಅರೆ ಸಾಹಿತಿಗಳನ್ನು ಆಯ್ದುಕೊಂಡಿದೆ.

 

ಇವಲ್ಲಕ್ಕೂ ಮಿಗಿಲಾಗಿ ಪಠ್ಯದಲ್ಲಿ ಜಾತಿ ಸಮೀಕರಣದ ಅಸ್ತ್ರವನ್ನು ಬಿಗಿಯಾಗಿ ಪ್ರಯೋಗಿಸಿದೆ. ಚಕ್ರತೀರ್ಥರ ಸಮಿತಿಯು ಬ್ರಾಹ್ಮಣ ಸಮುದಾಯದಿಂದ ಆವೃತವಾದ ಹೊರತಾಗಿ ಪರಿಷ್ಕರಣೆಯಿಂದ 21 ಶೂದ್ರ ಕವಿ ಲೇಖಕರ ಬರಹಗಳನ್ನು ಕೈ ಬಿಡಲಾಗಿದೆ.ಇದರಲ್ಲಿ 6 ಕ್ಕೂ ಹೆಚ್ಚು ಜನ ದಲಿತ ಸಮುದಾಯ ಹಾಗೂ 8 ಕ್ಕೂ ಹೆಚ್ಚು ಜನ ಲಿಂಗಾಯುತ ಸಮುದಾಯದ ಬರಹಗಾರರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಜನಪ್ರಿಯತೆ ಹಾಗೂ ನಿಪುಣತೆ ಹೊಂದಿದ ಬರಹಗಾರರನ್ನು  ಕೈ ಬಿಡುವುದರೊಂದಿಗೆ 28 ಜನ ಬರಹಗಾರರನ್ನು ಸೇರ್ಪಡೆಗೊಳಿಸಲಾಗಿದೆ. ಸೇರ್ಪಡೆಗೊಂಡ 95% ಜನ ಒಂದೇ ಸಮುದಾಯಕ್ಕೆ ಸೇರಿದ ಜನರಾಗಿದ್ದಾರೆ. ಅದು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ವಿವಿಧ ಜಾತಿ,ಭಾಷೆ , ಭೂಷಣಗಳಿರುವ ಈ ನೆಲದಲ್ಲಿ ಒಂದೇ ಸಮುದಾಯದ ಜನರನ್ನು ಕೇಂದ್ರೀಕರಿಸೂದು ಎಷ್ಟು ಸರಿ..? ಈ ವಿಚಾರವು ಒಂದೇ ಸಮುದಾಯವನ್ನು ಎಲ್ಲರೂ ಒಪ್ಪಬೇಕು ಎನ್ನುವ ಹಿಟ್ಲರ್ ಹಾಗೂ ಗೋಬೆಲ್ಸ್ ನಡೆಯನ್ನು ಮತ್ತೊಮ್ಮೆ ನೆನಪಿಸುತ್ತದೆ.

 

ಪಠ್ಯಪುಸ್ತಕದಿಂದ  ಕೈ ಬಿಟ್ಟಿರೂದು ಸಾಮನ್ಯರನ್ನೇನಲ್ಲ ಬದಲಾಗಿ ಅವಿಸ್ಮರಣೀಯ ಕೊಡುಗೆಗಳನ್ನು ನೀಡಿದ ಮಹಾನ್ ಸಾಧಕರನ್ನಾಗಿದೆ. ಮಹಾನ್ ಸಾಮಾಜಿಕ  ಸುಧಾರಕರಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತು ‘ಶ್ರೀನಾರಾಯಣಗುರು ಧರ್ಮಪಾಲನ ಯೋಗಂ ಎಂಬ ಪಾಠವನ್ನು 10 ನೇ ತರಗತಿ ಸಮಾಜ ವಿಜ್ಞಾನ ಪಠ್ಯದಿಂದ ಹೊರಗಿಡಲಾಗಿತ್ತು . ವಿರೋಧಗಳು ಬಂದ ನಂತರ ಮತ್ತೇ  ಪಠ್ಯಕ್ಕೆಸೇರಿಸಲಾಗಿದೆ. ಇದು ಮೂಗಿಗೆ ತುಪ್ಪ ಒರೆಸುವ ತಂತ್ರವಷ್ಟೇ.ಭಾರತದಲ್ಲಿ ಶತಮಾನಗಳಿಂದ ತರ್ಕಗಳಿಗೆ ಎಡೆ ಮಾಡಿದ ಚಾತುರ್ಥಣ ಪಧ್ದತಿಯ ನಿರ್ಮೂಲನೆಗೆ ಅವಿರತ ಪರಿಶ್ರಮಿಸಿದವರಾಗಿದ್ದಾರೆ ನಾರಾಯಣ ಗುರು. ಆದರೆ ಮೇಲ್ಜಾತಿ ಆಶ್ರಯದಲ್ಲಿ ದಿನದೂಡುವ ಸರ್ಕಾರವು ಮಕ್ಕಳ ಭವಿಷ್ಯಕ್ಕೆ ಕುತ್ತನ್ನಿಟ್ಟು ಭವಿಷ್ಯದ ಸುಂದರ ಭಾರತವನ್ನು ಛಿಧ್ರಗೊಳಿಸಲು ಸಿಧ್ಧವಾಗಿದೆ.

 

ಕನ್ನಡದ ನೆಲದಲ್ಲಿ ಕನ್ನಡದ ನೆತ್ತರಿಗೆ ಅವಮಾನ ಬಗೆಯೂದು ದ್ರೋಹವೇ ಸರಿ.... ಹೌದು ಚಕ್ರತೀರ್ಥರ ಕಟ್ಟುಕತೆ ಸಮಿತಿಯು ಕನ್ನಡಿಗರ ತಾಳ್ಮೆ ಪರೀಕ್ಷಿಸಲು ಮುಂದಾಗಿದೆ. ಮೈಸೂರು ಒಡೆಯರ ಕುರಿತ ವಸ್ತುನಿಷ್ಠವಾದ ವಿಸ್ತಾರ ಮಾಹಿತಿಯು ಬರಗೂರು ರಾಮಚಂದ್ರಪ್ಪನವರ ಸಮಿತಿಯ ಪಠ್ಯಪುಸ್ತಕದಲ್ಲಿತ್ತು. ಆದರೆ ಚಕ್ರತೀರ್ಥ ಸಮಿತಿ ಅವೆಲ್ಲವನ್ನೂ ಕಿತ್ತು ಹಾಕಿದೆ.

7ನೇ ತರಗತಿಯ ಸಮಾಜ ವಿಜ್ಞಾನ (ಭಾಗ -1) ಪುಟ 51-54ರ ವರೆಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ ವಿಶ್ವೇಶ್ವರಯ್ಯ ಸೇರಿದಂತಿಹ ಕನ್ನಡದ ಮುಖಗಳನ್ನು ಅಳಿಸಿ ಹಾಕಿದೆ.

 

ವರ್ಣ- ಜಾತಿ ವ್ಯವಸ್ಥೆಯ ವಿರುದ್ಧ ಪ್ರತಿಭಟನೆ ಮಾಡಿ ದುಡಿಯುವ ವರ್ಗಗಳ ಪರವಾದ, ಮಾನವೀಯತೆಯ ಪರವಾದ ಹೋರಾಟ ಕಟ್ಟಿದ ಬುದ್ಧ, ಮಹಾವೀರ, ಬಸವಣ್ಣ, ಕನಕದಾಸರು ನಾರಾಯಣ ಗುರುಗಳು, ಸಾವಿತ್ರಿಫುಲೆ, ಅಂಬೇಡ್ಕರ್, ಕುವೆಂಪು ಮುಂತಾದವರ ಚರಿತ್ರೆಯನ್ನು ನಿರಾಕರಿಸಿರುವುದು ಅಥವಾ ತಿರುಚಲು ಪ್ರಯತ್ನಿಸಿರುವುದು ಅಕ್ಷಮ್ಯ. ಹಾಗೆಯೆ  ಸಾಮ್ರಾಜ್ಯ ಶಾಹಿಗಳ, ದೊಡ್ಡ ಸಾಮ್ರಾಜ್ಯಗಳ ವಿರುದ್ಧ ಯುದ್ಧ ಮಾಡಿದ ಅಬ್ಬಕ್ಕ ರಾಣಿ, ಕೆಂಪೇಗೌಡರು ಮುಂತಾದ ಮಹನೀಯರನ್ನು ನಿರ್ಲಕ್ಷಿಸಿರುವುದು ಖಂಡನೀಯ.

 

ಒಟ್ಟಿನಲ್ಲಿ ಸಂಘಮನೋಭಾವನೆಗಳನ್ನು ಮಕ್ಕಳ ಮನಸ್ಸಿಗೆ ತುರುಕಿಸುವ ಪ್ರಯತ್ನ. ಜನಾಂಗ ದ್ವೇಷದಿಂದ ರಕ್ತಪಾತ ಹರಿಸಿದ ಜರ್ಮನಿಯ ಹಿಟ್ಲರನ ದುಷ್ಪ್ರಯೋಗಗಳು ಉತ್ತಮ ಮತ್ತು ಮಾದರಿದಾಯಕವೆಂದು ಭಾವಿಸಿದವರಿಂದ ಇಂತಹ ಕುಯಕ್ತಿ ಪ್ರಯೋಗ ನಿರೀಕ್ಷಣೀಯ..


Author

Author
Anas Kodippady
Student @ Shamsul Ulama Thodar

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.