ಭಾರತದ ನಿಯುಕ್ತ ರಾಷ್ರ್ಟಪತಿಯರಿಂದ ಜನತೆ ಬಗೆಯುವುದೇನು?

 

ದ್ರೌಪತಿ ಮುರ್ಮುರವರು ಭಾರತದ ನೂತನ ರಾಷ್ಟ್ರಪತಿಯಾಗಿ ನೇಮಕಗೊಂಡಿರುವ ವಿಚಾರ ನಮಗೆ ತಿಳಿದುಬಂದಿದೆ. ಇವರು ಭಾರತದ ಪ್ರಥಮ ಪ್ರಜೆಯಾಗಿ ಆಯ್ಕೆಗೊಂಡಿದ್ದಾರೆ. ಆದಿವಾಸಿ ಮೂಲ ಸಮುದಾಯದಿಂದಾಗಿದ್ದರೂ ಇವರ ಸಾಧನೆಗಳು ಉನ್ನತದ ಮೆಟ್ಟಿಲನ್ನೇರಿದೆ. ಇದೇ ಕಳೆದ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ ಡಿ ಅಭ್ಯರ್ಥಿಯಾಗಿ ಭಾಗವಹಿಸಿದ ಇವರು ಯಶಸ್ಸನ್ನು ಬೇಟಿಯಾಗುವುದರಲ್ಲಿ ದೂರಸ್ಥವಾಗಲಿಲ್ಲ.

          ಇವರ ಜೀವನವು ನಮ್ಮ ಭಾರತ ಜನತೆಗೆ ಮಾದರಿಯಾಗಿದೆ. ಬುಡಕಟ್ಟು ಜನಾಂಗದಲ್ಲಿ ಜನಿಸಿ ಹಲವು ಕಾಲಗಳ ವರೆಗೆ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸಿದರು. ಮತ್ತೆ ರಾಜಕೀಯದಲ್ಲಿ ಪ್ರವೇಶಿಸಿದರು. ಹಲವು ಹುದ್ದೆಗಳನ್ನು ನಿಭಾಯಿಸಿ ಜಾರ್ಖಾಂಡದ ರಾಜ್ಯಪಾಲರಾಗಿ ಉದ್ಯೋಗ ಮಾಡಿದ್ದರು. ಮತ್ತೆ ಕೆಲವು ಅವಧಿಗಳ ನಂತರ ತನ್ನ ಊರಾದ ರಾಯರಂಗಪುರ (ಜಾರ್ಖಂಡ್) ಕ್ಕೆ ತೆರಳಿದರು. ಇವರು ಹಲವು ಹೊಣೆಗಾರಿಕೆಯನ್ನು ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಿಭಾಯಿಸಿದಿರುವುದು ನಮ್ಮ ಭಾರತಕ್ಕೆ ಹೆಮ್ಮೆಯಾಗಿದೆ.

Source: Zee News


ಇವರು ರಾಷ್ಟ್ರಪತಿಯಾಗಿ ರಾಜಕೀಯದಲ್ಲಿ ಮೆಟ್ಟಿಲನ್ನು ತುಳಿದದ್ದು ಹೌದು. ಆದರೆ ಕರ್ತವ್ಯ ಹೊಣೆಗಾರಿಕೆಯನ್ನು ವಿಜೇತರಾಗಿ ಸಾಬೀತು ಪಡೆಸುವುದರಲ್ಲಿ ಭಾರತ ಜನತೆಗೆ ಆತಂಕವನ್ನು ಉಂಟುಮಾಡಿದೆ. ಮಾಜಿ ರಾಷ್ಟ್ರಪತಿ ರಾಮನಾತ್ ಕೋವಿಂದ್ ರವರು ದಲಿತ ವರ್ಗದವರಾಗಿದ್ದರು. ತನ್ನ ಜನಾಂಗವನ್ನು ಮರೆತು ಮೇಲ್ಮಟ್ಟದವರಿಗೆ ಪ್ರೋತ್ಸಾಹವು ನೀಡುತ್ತಿದ್ದರು ಎಂಬ ಆರೋಪ ಇವರ ಮೇಲಿತ್ತು. ಹೀಗೆಯೇ ದ್ರೌಪತಿ ಮುರ್ಮುರವರು ಮಾಡುತ್ತಾರೋ ಅಥವಾ ತನ್ನ ಜನಾಂಗಕ್ಕೆ ಮಾತ್ರ ಪ್ರಾಮುಖ್ಯತೆ ನೀಡುತ್ತಾರೋ ಎಂಬ ಆತುರವು ಎಲ್ಲರನ್ನು ಕಾಡುತ್ತಿದೆ

ಹಲವಾರು ಹುದ್ದೆಯನ್ನು ಒಳ್ಳೆಯ ವ್ಯವಸ್ಥೆಯಲ್ಲಿ ನಿಭಾಯಿಸಿದ್ದರು. ಮುಂದೆ ಏನು ಮಾಡುವರು ಎನ್ನುವುದರಲ್ಲಿ ವಿಚಾರವಾಗುತ್ತದೆ . ಇನ್ನೂ ಚುನಾವಣೆಯ ವೇಳೆಯಲ್ಲಿ ಪ್ರತಿಪಕ್ಷಿಗಳ ಎದುರು ಬಾರಿ ಮತಗಳಿಂದ ಗೆದ್ದು ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದರು.

ರಶ್ಯಾ, ಚೀನಾ, ಶ್ರೀಲಂಕ, ನೇಪಾಲ ದಂತಹ ಹಲವು ರಾಜ್ಯಗಳು ದ್ರೌಪತಿ ಮುರ್ಮುರವರಿಗೆ ಅಭಿನಂದಿಸಿದರು. ಅದಲ್ಲದೆ ಚೀನಾ ಅಧ್ಯಕ್ಷ ಕ್ಸೀ ಜಿಂಪಿಂಗ್ ರವರು ಎರಡು ರಾಜ್ಯಗಳ ನಡುವೆ ಕೈ ಜೋಡಿಸಲು ಹಾಗೂ ಸಹಕಾರ ನೀಡಲು ಸಿದ್ದರಾಗಿದ್ದಾರೆ.

          ಇದಕ್ಕೆ ಅನುಗುಣವಾಗಿ ದ್ರೌಪತಿ ಮುರ್ಮು ಜುಲೈ 26 -2022 ರಂದು ಪ್ರಮಾಣ ವಚನ ಸ್ವೀಕರಿಸುವ ವೇಳೆಯಲ್ಲಿ ಹೇಳಿದರು: ನಮ್ಮ ಕಣ್ಣಿಗೆ ಹಲವಾರು ವರ್ಷಗಳಿಂದ ಬಡವರು ಅಭಿವೃದ್ದಿಯಿಂದ ವಂಚಿತರಾದವರು. ಹಿಂದುಳಿದವರು ಮತ್ತು ಬುಡಕಟ್ಟು ಜನರು ಇಂದು ನಮ್ಮ ದೇಶದಲ್ಲಿ ಕಾಣಲು ಸಾಧ್ಯವಾಗುತ್ತದೆ. ಇವರನ್ನು ಕೈ ಹಿಡಿದು ಮೇಲೆತ್ತಿ ತರುವುದು ನಮ್ಮ ಕರ್ತವ್ಯವಾಗಿದೆ

ನಾವು ಅವರಿಗೆ ಬೇಕಾದ ಯೋಜನೆಗಳನ್ನು ಮಾಡಿ ಅಭಿವೃದ್ದಿಯ ದಾರಿಗೆ ಕರೆದುಕೊಂಡು ಬರಬೇಕು. ಬಡವರ ಕನಸನ್ನು ನನಸು ಮಾಡುವುದು ನಮ್ಮ ಹೊಣೆಗಾರಿಕೆಯಲ್ಲಿದೆ. ಇದು ನನಗೆ ಅತ್ಯಂತ ಸಂತೃಪ್ತಿ ಸಂಗತಿ ಇದುವೇ ಪ್ರಜಾಪ್ರಭುತ್ವದ ಶಕ್ತಿ ಎಂದು ಭಾರತ ಜನತೆಗೆ ಸನ್ನ ಮನಭಾವನೆಯನ್ನು ಖಚಿತಪಡಿಸುತ್ತಾ ಹೇಳಿದರು:ಅತ್ಯುನ್ನತ ಹುದ್ದೆಗೆ ಭಾರತದ ಪ್ರಜಾಪ್ರಭುತ್ವಕ್ಕೆ ದ್ರೌಪತಿ ಮುರ್ಮುರವರಿಂದ ಚೈತನ್ಯ ಮತ್ತು ಸಾರ್ಮಧ್ಯಕ್ಕೆ ಸಾಕ್ಷಿ

ಹೀಗೆ ರಾಜಕಾರಣಿಗಳು ದ್ರೌಪತಿ ಮುರ್ಮುರವರ ಸಾಮರ್ಥ್ಯವನ್ನು ಉತ್ತೇನಜವನ್ನು ನೀಡುತ್ತಾ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ.

          ದ್ರೌಪತಿ ಮುರ್ಮು ಸಂವಿಧಾನ ರಕ್ಷಕಿ ಎಂದು ಸಾಬೀತು ಪಡೆಸುತ್ತಾರೆ. ಅವರು ಸಮುದಾಯದ ಬೆಳವಣೆಗೆಯನ್ನು ವಿಜಯಶಾಲಿಯಾಗಿ, ದೇಶವನ್ನು ಅಭಿವೃದ್ದಿ ದೇಶವಾಗಿ ಮಾರ್ಪಡಿಸುತ್ತಾರೆ. ಬಡವರ ಹಾಗೂ ಹಿಂದುಳಿದವರ ಕಷ್ಟ ಕಾರ್ಪಣ್ಯಗಳನ್ನು ಸಮೂಹದಿಂದ ವಿನರ್ಜಿಸುತ್ತಾರೆ ಎಂಬಂತಹ ಹಲವಾರು ಹೇಳಿಕೆಗಳು ಪ್ರಜೆಗಳಿಂದ ಬಂದಿರುವುದು ನಾವು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಬಹುದು.

 

ರಾಷ್ಟ್ರಪತಿಯರಿಗೆ ಇರುವ ಅಧಿಕಾರಗಳು:

ತುರ್ತು ಪರಿಸ್ಥಿತಿಯನ್ನು ಘೋಷಿಸುವುದು ಕ್ಷಮದಾನ ನೀಡುವುದು, ಸುಗ್ರೀವಾಜ್ಞೆ ಹೊರಡಿಸುವುದು, ಸಂಸತ್ ಅಧಿವೇಶನ ಕರೆಯುವುದು, ಕೇಂದ್ರ ಸಂಪುಟದ ಶಿಫಾರಸ್ಸಿನ ಮೂಲಕ ಲೋಕಸಭೆಯನ್ನು ವಿಸರ್ಜಿಸುವುದು, ಯಾವುದೇ ಮಸೂದೆಗೆ ತಿದ್ದುಪಡಿ ಸೂಚಿಸಿ, ಸಂಸತ್ತಿಗೆ ಮರುಕಳಿಸುವುದು. 

ಇಂತಹ ಮುಖ್ಯ ಅಧಿಕಾರಗಳು ಒಂದು ದೇಶದ ರಾಷ್ಟ್ರಪತಿಯರಿಗೆ ಹೊಣೆಗಾರಿಕೆ ಆಗಿರುತ್ತದೆ. ಇದು ದೇಶ ಕೊಡುವ ಅಧಿಕಾರವಾಗಿದೆ. ಇವುಗಳನ್ನು ಒಳ್ಳೆಯ ರೀತಿಯಲ್ಲಿ ನಿಭಾಯಿಸುವ ಮತ್ತು ಕಾರ್ಯ ನಿರ್ವಾಹಣೆ ಮಾಡುವವರಿಗೆ ಮಾತ್ರ ಇದನ್ನು ಸಮರ್ಪಿಸುವುದು. ರಾಷ್ಟ್ರಪತಿ ದೇಶದ ಆದ್ಯ ಪ್ರಜೆಯಾದುದರಿಂದ ರಾಷ್ಟ್ರಪತಿ ಪದವಿಯನ್ನು ಅತ್ಯನ್ನತ ಸ್ಥಾನವಾಗಿ ಪರಿಗಣಿಸಲಾಗುತ್ತದೆ.

ಈಗ ದ್ರೌಪತಿ ಮುರ್ಮುರವರು ರಾಷ್ಟ್ರಪತಿಯಾಗಿರುವುದು, ಭಾರತವಿಡೀ ಖುಷಿಯಿಂದ ಸಂಭ್ರಮಿಸಿದೆ, ಮುಖ್ಯವಾಗಿ ಬಡವರು ಹಿಂದುಳಿದವರು ವಿಷಯದಲ್ಲಿ ತಮ್ಮ ಸಡಗರವನ್ನು ವ್ಯಕ್ತಪಡಿಸಿದ್ದಾರೆ. ದ್ರೌಪತಿ ಮುರ್ಮುರವರು ನಮ್ಮ ದೇಶದ ಪ್ರಜಾಧಿಕಾರದ ಸೌಂದರ್ಯ ವ್ಯಕ್ತಿ ರಾಷ್ಟ್ರಪತಿಯಾಗಿದ್ದರೆ ಅದು ದೇಶದ ಬಡವರಿಗೆ ಕ್ಷೇಮವಾಗಿದೆ. ಭಾರತೀಯರಿಗೆ ಒಳ್ಳೆಯ ವ್ಯವಸ್ಥೆ, ಸೌಲಭ್ಯಗಳನ್ನು ಹೆಚ್ಚಿಸಿ, ಹಲವು ಅಭಿವೃದ್ದಿಯ ಯೋಜನೆಗಳನ್ನು ಜಾರಿಗೆ ತಂದು ಉನ್ನತ ಸ್ಥಾನಕ್ಕೆ ನಮ್ಮ ದೇಶವನ್ನು ತರಬೇಕು.

 

ರಾಷ್ಟ್ರಪತಿಯಾಗಿ ಮುಂದೆ ಏನು ಮಾಡಬೇಕು?:

ಮೊದಲನೆಯಾಗಿ, ದೇಶಕ್ಕೆ ಬೇಕಾಗಿರುವುದು ಶಿಕ್ಷಣವಾಗಿದೆ. ಶಿಕ್ಷಣದ ರೇಕೆಯನ್ನು ಭಾರತೀಯಲ್ಲಿ ಹೆಚ್ಚಿಸಿ, ದೇಶದ ಅಭಿವೃದ್ಧಿಯನ್ನು ಹೆಚ್ಚಿಸಬಹುದು. ಜಾತಿ, ಮತ , ಧರ್ಮ ಎನ್ನುವುದು ಅಡ್ಡಿಯಾಗಬಾರದು ಎನ್ನುವುದು ಮುಖ್ಯ ಸಂಗತಿ. ಒಂದು ಕಾರಣದಿಂದ ದೇಶದಲ್ಲಿ ನಾಶವು ಕಂಡುಬರುತ್ತಿರುವುದು.

ಸಂವಿಧಾನ ರಕ್ಷಕಿಯಾಗಿ ದ್ರೌಪತಿ ಮುರ್ಮುರವರು ಸಾಬೀತು ಪಡಿಸಬೇಕು. ಪ್ರಮಾಣ ವಚನದ ಸಮಯದಲ್ಲಿ ಹೇಳಿದ ಬಡವರ ಕನಸ್ಸನ್ನು ಈಡೇರಿಸುವುದು ಎಂಬುವುದನ್ನು ಸಾಕ್ಷಾಪಡಿಸಬೇಕು. ದೊರೆತ ಹುದ್ದೆಗೆ ಅನುಗುಣವಾಗಿ ಅರ್ಹತೆಯ ವ್ಯಕ್ತಿಯಾಗಿ ಹೊಣೆಗಾರಿಕೆಗಳನ್ನು ನಿಭಾಯಿಸಬೇಕು. ಜಾತಿ, ಧರ್ಮಕ್ಕೆ ಅಡ್ಡಿಯಾಗದಂತಹ ಕಾಯ್ದೆ ನಿಯಮಗಳನ್ನು ಜಾರಿಮಾಡಬೇಕು. ಭಾರತದ ಆರ್ಥಿಕತೆಯನ್ನು ಹೆಚ್ಚಿಸಬೇಕು.

ಭಾರತ ಜನತೆ ಇಚ್ಚಿಸುವಂತಹ ಆಡಳಿತವನ್ನು ನಡೆಸಬೇಕು. ದೇಶದಲ್ಲಿ ನಡೆಯುವ ಸಾಕಷ್ಟು ಶೋಷಣೆಗಳನ್ನು ತಡೆಗಟ್ಟಬೇಕು. ಮುಂದೆ ಇಂತಹ ವಿಷಯಗಳು ನಡೆಯಬಾರದಂತೆ ನೋಡಿಕೊಳ್ಳಬೇಕು. ಸಂವಿಧಾನ ನೀಡುವ ಕಲೆಗಳು ಬರದಂತೆ ಕಾಪಾಡಬೇಕು. ಎಲ್ಲಾ ಧರ್ಮದವರಿಗೆ ಅವರ ಹಕ್ಕುಗಳು  ದೊರೆಯಬೇಕು. ಎಲ್ಲಾ ಸಮುದಾಯದವರ ಸಮಾನತೆಯ ಬೀಜವನ್ನು ಬಿತ್ತಿ, ಅಭಿವೃದ್ದಿ ದೇಶಗಳ ಪಟ್ಟಿಯಲ್ಲಿ ತರುವುದು ನಮ್ಮ ನೂತನ ರಾಷ್ಟ್ರಪತಿಯ ಕರ್ತವ್ಯವಾಗಿದೆ.


Author
David East - Author
Shamsheer Uppinangady
Student @ Darunnoor Kashipatna

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.