ಹೆಣ್ಣು ಅಪಶಕುನವಾಗಿ ಹಿಂದೊಂದು ಕಾಲ ಕಾಣುತಿತ್ತು. ಆದರೆ ಇದರ ವಾಸ್ತವಗಳನ್ನು ಸರಿಯಾಗಿ ಅರ್ಥೈಸಿದ ಕೆಲವರು ಸ್ತ್ರೀಯರಿಗೆ ಸರಿಯಾದ ಹಕ್ಕುಗಳು ಒದಗಿಸಿದರು. ಸ್ರ್ತೀಯರ ಸುರಕ್ಷಿತೆಗಾಗಿ ಅವಳ ಮಾನ ಮುಚ್ಚುವುದು ಕಡ್ಡಾಯವಾಗಿದೆ. ಆದರೆ ಕಾಲ ಅಲ್ಪ ಕಳೆದ ಬಳಿಕ ಸ್ತ್ರೀಯರ ಹಕ್ಕುಗಳನ್ನೇ ಸರಕಾರ ಕಿತ್ತುಕೊಳ್ಳಲು ಯತ್ನಿಸುತ್ತಿದೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಆದರೆ ಇಂದು ಸ್ತ್ರೀಯರು ತನ್ನ ಸುರಕ್ಷತೆಗಾಗಿರುವ ಹಿಜಾಬ್ ದರಿಸಿದರೆ ಶಾಲಾ ಪ್ರವೇಶವನ್ನೇ ಸರಕಾರ ನಿರಾಕರಿಸಿದೆ.
ಪವಿತ್ರ ಇಸ್ಲಾಂ ನಲ್ಲಿ ಪ್ರತಿಯೊಂದು ಮಹಿಳೆಯೂ ತನ್ನ ಸುರಕ್ಷತೆಯನ್ನು ಕಾಪಾಡುವ ಸಲುವಾಗಿ ಹಿಜಾಬ್ ವಸ್ತ್ರವನ್ನು ಧರಿಸಲು ಕಡ್ಡಾಯಗೊಳಿಸದೆ. ಇದು ಮುಸ್ಲಿಂ ಸ್ತ್ರೀಯರ ಅಸ್ಮಿತೆ. ದೇಶದಲ್ಲಿ ಹಲವು ಕೆಟ್ಟ ಪ್ರಕಟಣಗಳು ದಾಖಲಾಗುತ್ತಿದ್ದರೂ ಕೇವಲ ಮುಸ್ಲಿಂ ಮಹಿಳೆಯರು ಧರಿಸುವ ಹಿಜಾಬ್ ವಿಷಯವನ್ನು ವಿವಾದ ಪಡಿಸಿ ಉಚ್ಚ ನ್ಯಾಯಾಲಯಲದ ಮೆಟ್ಟಿಲೇರಿದೆ ಎಂಬುವುದು ಹಸ್ಯಾಸ್ಪದ.
Image Source:thequint.com |
ದೇಶದಾದ್ಯಂತ
ಸರಕಾರದ ಹಲವು ವೈಫಲ್ಯಗಳು ಸಾಬಿತಾಗುತ್ತಿರುವಾಗ ಅವುಗಳನ್ನು ಮರೆಮಾಚಲು ಮುಸ್ಲಿಂ ಮಹಿಳೆಯರು
ಶಿರವಸ್ತ್ರದ ಮೇಲೆ ವಿವಾದ ಸೃಷ್ಟಿಸಿ ಜನ ವಿರೋಧಿ ಕೇಂದ್ರ ಬಜೆಟ್ ಮಿತಿ ಮೀರಿದ ನಿರುದ್ಯೋಗ
ಮತ್ತು ಗಗನಕ್ಕೇರಿದ ಅಗತ್ಯ ವಸ್ತುಗಳ ಬೆಲೆ ಏರಿಕೆ ಮುಂತಾದ ಸಮಸ್ಯೆಗಳು ತಲೆ ಮರೆಸಿ
ಕೊಳ್ಳುತ್ತಿದೆ.
ಪವಿತ್ರ
ಇಸ್ಲಾಮಿನ ಪ್ರಕಾರ 14 ಶತಮಾನಗಳ ಮುಂಚೆಯೇ ಪ್ರತಿಯೊಂದು ಸ್ತ್ರೀಯಾ ಆಕೆಯ ದೇಹವನ್ನು ಮುಚ್ಚಿ
ಕೊಳ್ಳಬೇಕು ಆಕೆ ಅನ್ಯ ಪುರುಷರ ಮುಂದೆ ಶಿರವಸ್ತ್ರಗಳನ್ನು ಧರಿಸಿ ತನ್ನ ಮುಖವನ್ನು
ಮರೆಸಿಕೊಳ್ಳಬೇಕು. ಇದು ಪವಿತ್ರ ಇಸ್ಲಾಂ ಸ್ತ್ರೀಯರಿಗೆ ನೀಡುವ ಸುರಕ್ಷತೆಯಾಗಿದೆ. ಮಹಿಳೆಯರು
ಪ್ರತೀ ಕ್ಷೇತ್ರದಲ್ಲಿ ಬೆಳೆಯಬೇಕು. ಪ್ರವಾದಿ (ಸ.ಅ) ರ ಪ್ರಕಾರ ಪ್ರತಿಯೊಂದು ಮುಸ್ಲಿಂ ಪುರಷನು
ಸ್ತ್ರೀಯಾ ವಿಧ್ಯಾಭ್ಯಾಸವನ್ನು ಕಲಿಯುವುದು ಅನಿವಾರ್ಯವಾಗಿದೆ.
ಕೆಲವು
ಶತಮಾನಗಳ ಮುಂಚೆ ಜಾತಿ, ವರ್ಗ, ಧರ್ಮ ಲಿಂಗಗಳ ಬೇಧಬಾವ ನಡೆಯುತ್ತಿತ್ತು. ಸ್ತ್ರೀಯರಿಗೆ
ಸಮಾಜದಲ್ಲಿ ಯಾವುದೇ ಸ್ಥಾನಮಾನಗಳು ನೀಡದೆ ಅವಳನ್ನು ಸಮುದಾಯದಲ್ಲಿ ಅತೀ ಕೀಳಾಗಿ
ಕಾಣುತ್ತಿದ್ದರು. ಇಂತಹ ಕೆಟ್ಟ ಆಚಾರಗಳನ್ನು ನಿವಾರಿಸುವ ಸಲುವಾಗಿ ಪ್ರತಿಯೋರ್ವನಿಗೂ ಪ್ರಾಥಮಿಕ
ಶಿಕ್ಷಣವನ್ನು ಕಡ್ಡಾಯಗೊಳಿಸಿದರು. ಆದರೆ ಈಗ ಯಾವಳಾದರೊಬ್ಬಳು ತನ್ನ ಸುರಕ್ಷತೆಗಾಗಿ ಹಿಜಾಬ್
ಶಿರವಸ್ತ್ರ ಧರಿಸಿ ಶಾಲಾ ವಠಾರಕ್ಕೆ ಪ್ರವೇಶಿಸಿದರೆ ವಿವಾದ ಸೃಷ್ಟಿಸುವರು. ಇದು ಮುಸ್ಲಿಂ
ಮಹಿಳೆಯರ ಅಸ್ಮಿತೆ.
ಹಿಜಾಬ್ ಧಾರಣೆ ನಿಷೇಧಿಸಿದ
ಹಿನ್ನಲೆಯಲ್ಲಿ ಮುಸ್ಲಿಂ ಸ್ತ್ರೀಯರು ಉನ್ನತ ವಿಧ್ಯಾಭ್ಯಾಸಕ್ಕಾಗಿ ಕಾಲೇಜುಗಳಿಗೆ
ತೆರೆಳುವುದನ್ನು ನಿರಾಕರಿಸುತ್ತಿರುವುದು ಸಮಾಜದಲ್ಲಿ ಕಂಡು ಬರುತ್ತಿದೆ. ಇಂತಹಾ ವಿಚಾರದಲ್ಲಿ
ಸ್ತ್ರೀಯರ ವಿಧ್ಯಾಭ್ಯಾಸ ನೋಡಿಕೊಳ್ಳುತ್ತಿದೆ.
ಸಾವಿರಾರು ವರ್ಷಗಳಿಂದ ರೂಡಿಯಲ್ಲಿರುವ
ಮುಸ್ಲಿಂ ಮಹಿಳೆಯರ ಶಿರವಸ್ತ್ರ ಧಾರಣೆ ಇಂದಿನ ವರೆಗೂ ಎಲ್ಲೂ ತೊಂದರೆಯಾಗಲಿಲ್ಲ ಆದರೆ ಈಗ ಎಕಾಎಕಿ
ಹಿಜಾಬ್ ವಿವಾದ ಬುಗ್ಗಿಲೆಬ್ಬಿಸಿ ಸರಕಾರದ ವೈಫಲ್ಯತೆಗಳನ್ನು ಮರೆಮಾಚಲು ಯತ್ನಿಸುತ್ತದೆ.
ವಿಧ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುವಂತೆ ಮಾಡಬೇಕು ವಿಧ್ಯಾರ್ಥಿ ಜೀವನ ಕಾಲದಲ್ಲೇ ಇಂತಹಾ ತೊಂದರೆಗಳನ್ನು ಸೃಷ್ಟಿಸಿ ಅವರ ಶಿಕ್ಷಣಕ್ಕೆ ಯಾವುದೇ ಮೊಟಿಕು ಉಂಟಾಗದಂತೆ ನೋಡಬೇಕು. ಯಾವುದಾದರೊಂದು ಸಮುದಾಯವನ್ನು ವಿರುದ್ಧ ಪಡಿಸುವ ನಿಟ್ಟಿನಲ್ಲಿ ಇವರ ಶಿಕ್ಷಣ ವ್ಯವಸ್ಥೆಯ ಮೇಲೆ ಕೈ ಹಾಕಬಾರದು. ವಿಧ್ಯಾರ್ಥಿಗಳ ತಲೆಯಲ್ಲಿ ತನ್ನ ವಿಧ್ಯಾಭ್ಯಾಸ ಕುರಿತಾದ ವಿಷಯಗಳು ಮಾತ್ರ ನಡೆಯಬೇಕು.