Source: outlookindia.com |
“ಹಿಂದೂ, ಕ್ರೈಸ್ತ, ಮುಸಲ್ಮಾನ ಪಾರಸೀಕ ಜೈನರ ಉದ್ಯಾನ”ವೆಂದು ರಾಷ್ಟ್ರ ಕವಿ ಕುವೆಂಪು ಬಿಂಬಿಸಿದ ಈ ಚೆಲುವ ಭಾರತದಲ್ಲಿ ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತವೆಂಬ ಭೇದಭಾವವಿಲ್ಲ. ವೈವಿದ್ಯತೆಗಳು ತುಂಬಿದ ಈ ಭವ್ಯ ಭಾರತದಲ್ಲಿ ವಿವಿಧ ಧರ್ಮ ಮತ್ತು ಭಾಷೆಗಳು ಒಳಗೊಂಡಿದೆ. ನಮ್ಮ ರಾಷ್ಟ್ರಕ್ಕೆ ಸಂಬಂಧಿಸಿದಂತೆ ಇಲ್ಲಿ ಎರಡು ರೀತಿಯ ಅಲ್ಪಸಂಖ್ಯಾತ ವಿಭಾಗವಿದೆ, ಭಾಷಾ ಅಲ್ಪಸಂಖ್ಯಾತ ಮತ್ತು ಧಾರ್ಮಿಕ ಅಲ್ಲಸಂಖ್ಯಾತ.
ಆದರೆ ಈ ರಾಷ್ಟ್ರದಲ್ಲಿ ಯಾವುದೇ ನಿರ್ಧಿಷ್ಟ ಭಾಷೆಯನ್ನು ಅಥವಾ ಧರ್ಮವನ್ನು ಅಲ್ಪಸಂಖ್ಯಾತವಾಗಿ ನಿರ್ಧರಿಸಲಿಲ್ಲ. ಜಾತಿ ಪದ್ದತಿಗಳು ಇರುವ ಭವ್ಯ ರಾಷ್ಟ್ರದಲ್ಲಿ ಪ್ರತ್ಯೇಕ ಆಚಾರ ವಿಚಾರಗಳಿಂದ ಅಲ್ಪಸಂಖ್ಯಾತರಾಗಿರುವ ಅನೇಕ ಪಂಗಡಗಳನ್ನು ಕಾಣಬಹುದು. ಸಂವಿಧಾನದ ವಿಧಿಯ ಪ್ರಕಾರ ಅಲ್ಪಸಂಖ್ಯಾತ ಪಂಗಡಗಳಿಗೆ ಕೆಲ ಸ್ಥಾನಮಾನಗಳಲ್ಲಿ ಪ್ರತ್ಯೇಕ ಅವಕಾಶ ನೀಡಬೇಕು.
ರಾಷ್ಟ್ರೀಯ ಜನಸಂಖ್ಯೆ ಪ್ರಕಾರ ಹಿಂದುಗಳೇ ಬಹುಸಂಖ್ಯಾತರು ಎಂಬುದು ನಿಜ. ಆದರೆ ರಾಜ್ಯಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. 2017 ರ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಅಲ್ಪಸಂಖ್ಯಾತರ ಬಗ್ಗೆ ಅಧ್ಯಯನ ನಡೆಸಲು ನೇಮಕಾತಿ ಮಾಡಿದೆ. ಈ ಅಧ್ಯಯನದ ವರದಿ ಪ್ರಕಾರ “ದೇಶದಲ್ಲಿ ಕೇವಲ 6 ಸಮುದಾಯಗಳಿಗೆ ಮಾತ್ರ ಅಲ್ಪಸಂಖ್ಯಾತ ಸ್ಥಾನಮಾನ ನೀಡಿದ್ದು. ಸಂವಿಧಾನಿಕ ಇತಿಮಿತಿಗಳ ಕಾರಣ ರಾಷ್ಟ್ರ ಮಟ್ಟದಲ್ಲಿ ಬಹುಸಂಖ್ಯಾತರನ್ನು ಅಲ್ಪಸಂಖ್ಯಾತರಾಗಿ ಮಾಡಲು ಸಾಧ್ಯವಿಲ್ಲ. ಆದರೆ ರಾಜ್ಯಗಳು ತಮ್ಮ ಮಟ್ಟದಲ್ಲಿ ತಮ್ಮದೇ ಆದ ಅಲ್ಪಸಂಖ್ಯಾತ ವರ್ಗೀಕರಣ ಮಾಡಬಹುದು ಎಂದು ಹೇಳಿತು. ಕನಿಷ್ಠ 15 ರಾಜ್ಯಗಳಲ್ಲಿ ರಾಜ್ಯಗಳದ್ದೇ ಆದ ಪ್ರತ್ಯೇಕ ಆಯೋಗಗಳಿವೆ ಆದರೆ ಅಲ್ಪಸಂಖ್ಯಾತರ ಜನಸಂಖ್ಯಾ ಬದಲಾವಣೆ ವಿಚಾರ ಬಂದಾಗ ರಾಷ್ಟ್ರಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ಹಾಗೂ ಜಿಲ್ಲಾಮಟ್ಟದಲ್ಲಿ ಪ್ರತ್ಯೇಕ. ಮಾನದಂಡಗಳನ್ನು ಅನುಸರಿಸಬೇಕಾಗುತ್ತಿದೆ.
ಒಂದು ರಾಜ್ಯದಲ್ಲಿ ಅಲ್ಪಸಂಖ್ಯಾವೆನಿಸಿದ ಸಮುದಾಯ ಕೆಲವು ಪ್ರದೇಶಗಳಲ್ಲಿ ಹೆಚ್ಚಿನ ಪ್ರಾಬಲ್ಯ ಹೊಂದಿರುಬಹುದು. ಉದಾಹರಣೆ ಮಣಿಪುರದ ನಾಲ್ಕು ಜಿಲ್ಲೆಗಳಲ್ಲಿ ಕ್ರೈಸ್ತರೇ ಬಹುಸಂಖ್ಯಾತರು. ಕೇರಳದ ಮಲಪುರಂ ಜಿಲ್ಲೆಯಲ್ಲಿ ಮುಸ್ಲಿಮರ ಜನಸಂಖ್ಯೆ ಶೇ 7 ಕ್ಕೂ ಹೆಚ್ಚಾಗಿದೆ. ಹೀಗಾಗಿ ಯಾರು ಅಲ್ಪಸಂಖ್ಯಾತರು ಯಾರು ಬಹುಸಂಖ್ಯಾತರು ಎಂದು ನಿರ್ಧರಿಸಲು ಪ್ರಶ್ನೆಯಾಗಿದೆ. ಅದಲ್ಲದೆ ‘ಅಲ್ಪಸಂಖ್ಯಾತ’ ಪದಕ್ಕೆ ಯಾವುದೇ ವ್ಯಾಖ್ಯಾನವಿಲ್ಲ. ಇವರನ್ನು ಸಂವಿಧಾನ 29 ನೇ ವಿಧಿಯಲ್ಲಿ ರಕ್ಷಣೆ ನೀಡುತ್ತದೆ. 29 ನೇ ವಿಧಿ ಹೀಗೆ ಹೇಳುತ್ತದೆ ಭಾರತದ ಭೂಪ್ರದೇಶದಲ್ಲಿ ಅಥವಾ ಅದರ ಯಾವುದೇ ಭಾಗದಲ್ಲಿ ವಾಸಿಸುವ ನಾಗರಿಕರ ಯಾವುದೇ ವಿಭಾಗವು ತನ್ನದೇ ಆದ ವಿಶಿಷ್ಟ ಭಾಷೆ, ಲಿಪಿ ಅಥವಾ ಸಂಸ್ಕೃತಿಯನ್ನು ಸಂರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿರುತ್ತದೆ. ಸಂವಿಧಾನದ 30 ನೇ ವಿಧಿಯಲ್ಲಿ ಇವರ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಮತ್ತು ನಿರ್ವಹಿಸುವ ಹಕ್ಕು ನಿರ್ಧರಿಸಿದೆ.
ಭಾರತದ ಸರ್ಕಾರವು (NCM) ಕಾಯ್ದೆಯ 2 (C) ಅಡಿಯಲ್ಲಿ ಕೇಂದ್ರವು ಅಕ್ಟೋಬರ್ 23-1993 ರಂದು 5 ಗುಂಪುಗಳನ್ನು (ಮುಸ್ಲಿಂ, ಕ್ರಿಶ್ಚನ್, ಸಿಕ್ಕರು, ಬೌಧ್ದರು ಮತ್ತು ಪಾರ್ಸಿ) ಅಲ್ಪಸಂಖ್ಯಾತ ಸಮುದಾಯಗಳೆಂದು ಸೂಚಿಸಿತ್ತು. ತದ ನಂತರ ಜನವರಿ 2014 ರಲ್ಲಿ ಜೈನರನ್ನು ಸಹ ಈ ಪಟ್ಟಿಗೆ ಸೇರಿಸಲಾಯಿತು.
ದೇಶದ ಅಬಿವೃದ್ಧಿಯಲ್ಲಿ ಪ್ರತೀ ಪ್ರಜೆಯ ಪಾಲು ಅಗತ್ಯವಾಗಿದೆ. ಈ ರಾಷ್ಟ್ರದ ಅಬಿವೃದ್ಧಿಗೆ ನಾವೆಲ್ಲರೂ ಕೈ ಜೋಡಿಸೋಣ....
ಜೈ ಹಿಂದ್...
👍👍
ಪ್ರತ್ಯುತ್ತರಅಳಿಸಿMasha Allah
ಪ್ರತ್ಯುತ್ತರಅಳಿಸಿ😍😍😍😍
ಪ್ರತ್ಯುತ್ತರಅಳಿಸಿMASHA ALLAH
ಪ್ರತ್ಯುತ್ತರಅಳಿಸಿ