ಮಾದಕ ವಸ್ತುಗಳ ವ್ಯಸನಿ ಯಾಗುತ್ತಿರುವ ಯುವ ಪೀಳಿಗೆ

 

ಮಾದಕ ವಸ್ತುಗಳ ವ್ಯಸನಿ ಯಾಗುತ್ತಿರುವ ಯುವ ಪೀಳಿಗೆ


    ಜಗತ್ತು ಎದುರಿಸುತ್ತಿರುವ ನಾನಾ ಕಾಯಿಲೆ, ತೊಂದರೆಗಳನ್ನು ಬಗೆ ಹರಿಸಲು ವಿವಿಧ ರೀತಿಯ ಸಂಶೋದನೆಗಳು ನಡೆದು ಅವುಗಳಿಗೆ ಪರಿಹಾರಗಳು ದೊರಕುತ್ತಿವೆ. ಆದರೂ ಹೊಸ ಹೊಸ ಕಾಯಿಲೆಗಳು ಉಲ್ಬಣಗೊಳ್ಳುತ್ತಿವೆ. ಮತ್ತು ಅದೇ ಕಾಯಿಲೆಗಳು ಹೊಸ ರೂಪಾಂತರವಾಗುತ್ತಿದೆ. ಇವುಗಳಲ್ಲಾದೆ ಕೆಲವು ರೋಗಗಳಿಗೆ ವಿವಿಧ ರೀತಿಯ ಸೂಕ್ತ ಪರಿಹಾರಗಳಿದ್ದರೂ ಅವುಗಳನ್ನು ನಿರ್ಮೂಲನೆ ಮಾಡಲು ಬಹು ಕಷ್ಟಕರ. ಯಾಕೆಂದರೆ ಸಮಸ್ಯೆಗಳಿಗೆ ವ್ಯಕ್ತಿಗಳ  ನಡವಳಿಕೆಗಳು ಮುಖ್ಯ ಕಾರಣವಾಗಿವೆ. ಮಾದಕ ವಸ್ತುಗಳ ಬಳಕೆ ಕುರಿತು ಪುರಾತನ ಕಾಲದ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಮಾದಕ ವಸ್ತುಗಳು ಕೆಲವು ಸಾಮಾಜಿಕ ಸಮಾರಂಭಗಳಲ್ಲಿ ಬಳಸುತ್ತಿದ್ದರು. ಅವುಗಳಲ್ಲಿ ಮಧ್ಯಪಾನ, ತಂಭಾಕು, ಗಾಂಜಾ ಇತ್ಯದಿಗಳಿಗೆ ಸೀಮಿತವಾಗಿದ್ದವು. ಕಾಲಂತರದಲ್ಲಿ ಹೊಸ ಹೊಸ ರಾಸಾಯನಿಕ ಮಾದಕ ವಸ್ತುಗಳನ್ನು ತಯಾರಿಸಿ ಅವುಗಳನ್ನು ಉಪಯೋಗಿಸಲು ವಿವಿಧ ರೀತಿಯ ವಿಧಾನಗಳೂ ಕೂಡ ಜನರು ಹುಡುಕತೊಡಗಿದರು.

        ಮಾದಕ ವಸ್ತುಗಳು ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯ ಹದಗೆಟ್ಟಿಸಿತ್ತಲ್ಲದೆ, ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ತಡೆಯುಂಟು ಮಾಡತೊಡಗಿತು. ಇದನ್ನು ಅರಿತ ಕೆಲವು ದೇಶಗಳು ಮಾದಕ ವಸ್ತುಗಳನ್ನು ತಯಾರಿಸುವುದು ಮತ್ತು  ಉಪಯೋಗಿಸುವುದು ಕಾನೂನು ಬಾಹಿರವೆಂದು ಪರಿಗಣಿಸಿದವು. ಮತ್ತು ಇವುಗಳನ್ನು ಉತ್ಪಾದಿಸುವುದು ಮತ್ತು ಉಪಯೋಗಿಸುವುದು  ಶಿಕ್ಷಾರ್ಹ  ಅಪಾರಾಧವೆಂದು ಪರಿರ್ಶಿಸಿ ಅದಕ್ಕೆ ಸೂಕ್ತ ಕಾನೂನು ಜಾರಿಗೊಳಿಸಿದೆ.

        ಪೋಷಕರು ಸರ್ವ ಮಕ್ಕಳ ಪ್ರಜ್ವಲವಾದ ಭವಿಷ್ಯವನ್ನು ಉಜ್ವಲ ಗೊಳಿಸಲು ಶಾಲಾ ಕಾಲೇಜುಗಳಿಗೆ ಕಳುಹಿಸಿದರೆ, ವಿದ್ಯಾ ಕೇಂದ್ರಗಲೇ ಮಾದಕ ವಸ್ತುಗಳಿಗೆ ಬಲಿಯಾಗುವಂತಹ ವಾತಾವರಣ ಸೃಷ್ಟಿಯಾಗಿದೆ. ಪೋಷಕರು ತನ್ನ ಮಕ್ಕಳನ್ನು ಕಾಳಜಿಯಿಂದ ನೋಡಿಕೊಳ್ಳದಿರುವುದು ಹಾಗೂ ಮತ್ತು  ಅವರ  ದುಡಿಮೆಯಲ್ಲಿಯೇ ಕಾರ್ಯನಿರತವಾಗಿವುದರಿಂದ ತಮ್ಮ ಮಕ್ಕಳನ್ನು ಅರ್ಥಮಾಡಿ ಕೊಳ್ಳಲು ಅವರಿಗೆ ಕಾಲವಕಾಶ ದೊರಕುತ್ತಿಲ್ಲಾ.   ಕಾರಣಕ್ಕೆ ಹದಿಹರೆಯ ಹಾಗೂ ತರುಣಾವಸ್ಥೆಯಲ್ಲಿರುವ ಯುವಕ ಯುವತಿಯರು ಇಂದು  ಮಾದಕ ವಸ್ತುಗಳ ಮೊರೆ ಹೋಗಲು ಮೂಲ ಕಾರಣ.

ವಿಶ್ವದಲ್ಲಿ ಶೇಕಡ 80 ರಷ್ಟು ಮಾದಕ ವಸ್ತುಗಳ ವ್ಯಸನಿಗಳ  ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಯಾಕೆಂದರೆ ಮಾದಕ ವಸ್ತುಗಳ ಅವಲಂಬನೆ ಮತ್ತು ಅವುಗಳಲ್ಲಿ ಉಂಟಾಗುವ ವಿವಿಧ ತೊಂದರೆಗಳನ್ನು ಸರಿಪಡಿಸಲು ವೈಜ್ಞಾನಿಕವಾಗಿ ನಿರ್ವಾರಿಸಲ್ಪಟ್ಟ  ಚಿಕಿತ್ಸೆ ಸೌಲಭ್ಯಗಳ ಕೊರತೆಯಿಂದಾಗಿದೆ. ಸೌಲಭ್ಯಗಳು ಕೆಲವು ಪಟ್ಟಣದಲ್ಲಿ ಅಥಾವಾ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿರಬಹುದು.ಆದರೆ ಮಾದಕ ವಸ್ತುಗಳಿಂದ ಬಳಲುತ್ತಿರುವವರು ಪ್ರಪಂಚದ ಎಲ್ಲಾ ಮೂಲೆ ಮೂಲೆಗಳಲ್ಲಿದ್ದಾರೆ.

        ಹಲವರು  ಜನ ಮಾದಕ ವಸ್ತುಗಳನ್ನು ಯಾವುದೇ ದೈಹಿಕ ಅಥವಾ ಮಾನಸಿಕ  ತೊಂದರೆಗೊಳಗಾಗದೆ ಮೋಜಿಗಾಗಿ ಉಪಯೋಗಿಸುತ್ತಾರೆ. ಇದನ್ನು ಉಪಯೋಗಿಸುವುದರಿಂದ ಶೇ 40  ಜನರಿಂದ ತಮ್ಮ ಕುಟುಂಬಗಳಿಗೆ ಮತ್ತು ಸಮಾಜಕ್ಕೆ ಅನೇಕ  ತೊಂದರೆಗಳನ್ನು ಉಂಟುಮಾಡುತ್ತಾರೆ.

        ಮಾದಕ ವಸ್ತುಗಳ ಉಪಯೋಗ ಆರಂಭಿಸುವುದೇಕೆ ಎನ್ನುವ ಪ್ರಶ್ನೇ ಹುಟ್ಟುವುದು ಸಹಜ. ಹೆಚ್ಚಿನ ಜನ ಇದನ್ನು ಮೊದಲನೇ ಸಲ ಮೋಜಿಗಾಗಿ ಸ್ನೇಹೀತರ ಒತ್ತಾಯದಿಂದಲೋ ಅಥವಾ  ನಿದ್ದೆಗಾಗಿಯೋ ಉಪಯೋಗಿಸುತ್ತಾರೆ. ಆದುದರಿಂದ ಮಾದಕ ವಸ್ತುಗಳಿಂದ ದೂರವಿರಲು ಹಾಗೂ ಉಪಯೋಗಿಸುವವರಿಗೆ ಇದರ ಪರಿಣಾಮಗಳ ಕುರಿತಾದ ಜಾಗ್ರತೆ ಮೂಡಿಸಲು ನಾವೆಲ್ಲರು  ಮುಂದಾಗಬೇಕಾಗಿದೆ

Author

David East - Author
Haris Adekkal
Student @ Darunnoor Kashipatna

ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.