ತಂದೆ : ಮನದಾಳದ ಪ್ರೀತಿಯ ದೊರೆ

    

    
Father: The ruler of the mind


    ಹೌದು, ಜೀವನದ ಬುನಾದಿಯನ್ನು ಭದ್ರಗೊಳಿಸುವ ಸಲುವಾಗಿ ಹಗಲಿರುಳು ಹೆಗಲ ಮೇಲೆ ನೂರಾರು ಭಾರವನ್ನಿರಿಸಿ ತನ್ನ ಮಗುವಿನ ಭವಿಷ್ಯವನ್ನು ರೂಪಿಸುವಲ್ಲಿ ಪಾತ್ರನಾಗುವ ನಿಜವಾದ ಹೀರೋ ನಮ್ಮೆಲ್ಲರತಂದೆ”. ತಾನು ಬಡವನಾಗಿ ಹುಟ್ಟಿದರೂ ನಮ್ಮ ಕಂದಮ್ಮಗಳು ಬಡವನಾಗದಿರಲಿ ಎಂದು ಹಾರೈಸುವರು. ಅವರನ್ನು ಗೌರವಿಸುವ ಸಲುವಾಗಿ ಪ್ರತೀ ವರ್ಷ ಜೂನ್ ತಿಂಗಳಲ್ಲಿ ಅಪ್ಪಂದಿರ ದಿನವನ್ನಾಗಿ ಆಚರಿಸಲಾಗುತ್ತದೆ.

1910  ಜೂನ್ 19 ರಂದು ಅಮೇರಿಕದ ವಾಷಿಂಗ್ಟನ್ನಿನಲ್ಲಿ ಮೊದಲ ಬಾರಿಗೆ ತಂದೆಯ ದಿನಾಚರಣೆಯನ್ನು ಆಚರಿಸಲಾಯಿತು. ತದನಂತರದ ದಿನಗಳಲ್ಲಿ ಪ್ರತೀ ವರ್ಷ ಈ ದಿನವನ್ನು ಆಚರಿಸುತ್ತಾ ಬಂದಿದ್ದೇವೆ. ಅಷ್ಟಕ್ಕೂ ಅಪ್ಪನ ಪಾತ್ರ ನಿಜಕ್ಕೂ ಅಚ್ಚರ. ಅಮ್ಮನ  ಗರ್ಭದಿಂದ ಈ ಜಗತ್ತಿಗೆ ಕಾಲಿಟ್ಟ ಬಳಿಕ ಅಪ್ಪವೇ ನಮಗೆ ಸರ್ವಸ್ವ. ಅವರ ಆ ಪ್ರೀತಿಗೆ ಸರಿಸಾಟಿಯಿಲ್ಲ. ಮಗುವಿನ ಇಂಪಾದಅಪ್ಪಎಂಬ ಕೂಗಿಗೆ ಕರಗದ ತಂದೆಯವರೇ ಇಲ್ಲ. 

ತನ್ನ ಕಾರ್ಯವನ್ನೆಲ್ಲವ ಬಿಟ್ಟು ಓಡೋಡಿ ಬರುವ ನಿಜವಾದ ಸ್ನೇಹಿತ. ಮಗುವಿನ ಉನ್ನತಿಯು ತಂದೆಯ ಸ್ವಭಾವ ಗುಣಗಳಿಂದಾಗಿದೆ. ತಾನು ಯಾವ ರೀತಿ ಇತರರೊಂದಿಗೆ ವರ್ತಿಸುವನೋ ಅದೇ ರೀತಿಯಲ್ಲಾಗಿರಬಹುದು ನಿನ್ನ ಮಗುವಿನ ಗುಣ. ಅಪ್ಪನೇ ಮಕ್ಕಳ ಮಾರ್ಗದರ್ಶಿ. ಅಪ್ಪನಿಲ್ಲದ ಜೀವನ ನೀರಿಲ್ಲದ ಬಾವಿಯಂತೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಪ್ಪ ದಿನವಿಡೀ ಧಣಿದು ಮನೆಗೆ ಹಿಂದಿರುಗಿದರೂ ಅವರ ಪಾಲಿಗೆ ಮಕ್ಕಳದ್ದೇ ಚಿಂತೆ. ಅವರ ಭವಿಷ್ಯವು ತನಗಿಂತ ಉತ್ತಮವಾಗಿರಲಿ ಎಂದು ಹಾರೈಸುವರು. 

    ಅಪ್ಪನೆಂದರೆ ಎಲ್ಲರಿಗೂ ಭಯ. ಮನೆಯ ಮುಂಭಾಗದಲ್ಲಿ ಅಪ್ಪನ ಕುರ್ಚಿ ಕಂಡರೆ ಸಾಕು ಓಡೋಡಿ ಅಮ್ಮನ ಬಳಿ ಅಡಗಿ ಕೂರುವರು. ಆ ಸವಿಯಾದ ನೆನಪುಗಳು ಮರೆಯಾಗದೆ ಮನದಲ್ಲಿಯೇ ಕೆತ್ತನೆಯಾಗಿ ಅಡಗಿದೆ ಅಲ್ವೇ?. ಅವನ ಆ ಹೊಡೆತಕ್ಕೆ ಮೈಯೆಲ್ಲವು ಒಮ್ಮೆಲೇ ಜುಂ ಎನ್ನುತಿತ್ತು. ಇಷ್ಟಕ್ಕೂ ತಂದೆ ಶತ್ರು ಎಂದು ಭಾವಿಸದಿರಿ. 

ನಿಜಕ್ಕೂ ಅವರೇ ನಮ್ಮ ನಿಜವಾದ ಆಪ್ತಮಿತ್ರ. ಜನ್ಮದಿಂದ ಮರಣ ಹೊಂದುವವರೆಗೂ ಸಾವಿಲ್ಲದ ಪ್ರೀತಿಯ ಗಣಿಯನ್ನು ತನ್ನ ಮಗನಿಗಾಗಿ ಸಮರ್ಪಿಸುವನು. ಒಬ್ಬ ತಂದೆ ನಾವು ಯಾವಾಗಲೂ ಅವಲಂಭಿಸಬಹುದಾದ ಒಬ್ಬ ಸ್ನೇಹಿತ. ಇತ್ತೀಚಿನ ಕಾಲದಲ್ಲಿ ಅಪ್ಪಂದಿರೂ ತನ್ನ ಮಕ್ಕಳನ್ನು ಸ್ನೇಹಿತರಂತೆ ಕಾಣುವುದು ಸಹಜ. 

ಸಮಯವೆಲ್ಲವನ್ನೂ ಮಕ್ಕಳಿಗೋಸ್ಕರವೇ ಮೀಸಲಾಗಿಡುವನು. ಅಪ್ಪನಿಗೆ ತನ್ನ ಮಕ್ಕಳ ಮೇಲೆ ಇರುವ ಪ್ರೀತಿ ಎಂದಿಗೂ ಕೊನೆಗೊಳ್ಳುವುದಿಲ್ಲ. ಅವರು ತನ್ನ ಮಕ್ಕಳ ಬಾಲ್ಯವನ್ನು ರೂಪಿಸಲು ಮತ್ತು ಅವರಿಗೆ ಜೀವನದ ಮಾರ್ಗದರ್ಶನವನ್ನು ನೀಡಲು ಸಹಾಯ ಮಾಡುತ್ತಾರೆ. ಜೀವನದ ಮೊದಲ ಹೆಜ್ಜೆಗಳನ್ನು ಎತ್ತಿಯಿಟ್ಟಾಗ ಮತ್ತು ಎಡವಿ ಬಿದ್ದಾಗ ತನ್ನ ಶಿಶುವನ್ನು ತೆರೆದ ತೋಳುಗಳಿಂದ ಬಾಚಿ ತಬ್ಬಿಕೊಳ್ಳುತ್ತಾನೆ. ಯಾವುದೇ ಒತ್ತಡದ ಪರಿಸ್ಥಿತಿಯಲ್ಲಿದ್ದರೂ ನಾವು ನೆನಪಿಸುವ ಮೊದಲ ವ್ಯಕ್ತಿಯೇ ನಮ್ಮ ತಂದೆ. 

ಇಡೀ ಕುಟುಂಬವನ್ನು ತನ್ನ ಭುಜದ ಮೇಲೆ ಕೂರಿಸಿಕೊಳ್ಳುತ್ತಾನೆ. ಪ್ರತಿಯೊಬ್ಬರ ಜೀವನದಲ್ಲಿ ಒಳಿತು ಮತ್ತು ಕೆಡುಕಿನ ಬಗ್ಗೆ ಜ್ಞಾನವನ್ನು ನೀಡುವ ಮೊದಲ ಶಿಕ್ಷಕ ನಮ್ಮೆಲ್ಲರ ತಂದೆ. ನಮ್ಮ ಬಗ್ಗೆ ಹೆಚ್ಚು ಅಹಂಕಾರ ಪಡುವ ಮನುಷ್ಯ. ರಾಬರ್ಟ್ ಬ್ರೌನಿಂಗ್ ರ ಮಾತು: ಪ್ರೀತಿಯನ್ನು ಪ್ರದರ್ಶಿಸು, ಭೂಮಿಯೂ ಸಮಾಧಿಯಾಗಿದೆ. ಬದುಕುವ ಜೀವನದುದ್ದಕ್ಕೂ ಪ್ರೀತಿಯ ಹನಿಗಳನ್ನು ಪಸರಿಸೋಣ. ಮರಣಕ್ಕೆ ಸಮಯವಿಲ್ಲ, ಇದ್ದಷ್ಟೂ ದಿನ ಇತರರೊಂದಿಗೆ ಸಹಬಾಳ್ವೆಯಿಂದ ಜೀವಿಸೋಣ ಎಂಬ ಸಂದೇಶವು ಈ ಮಾತಿನಲ್ಲಿ ತಿಳಿಯಬಹುದು. ಅಪ್ಪನ  ಸಲಹೆಯಿಂದ ಇಂದು ನೂರಾರು ಮಕ್ಕಳ ಜೀವನವೂ ಪ್ರಶೋಭಿತವಾಗಿದೆ. 

    ಜಗವಿಡೀ ಅವನ ಮಾತುಗಳನ್ನು ಹೇಳಿ , ಹೊಗಳಿ ಕೊಂಡಾಡುತಿದ್ದಾರೆ. ಅವರ ಆ ಸವಿಯಾದ ಸಲಹೆಗಳು ಮರೆಯಾಗದೇ ನಮ್ಮ ಮನಗಳಲ್ಲಿ ಸದಾ ಕಾಡುತ್ತಿದೆ. ಮಕ್ಕಳಲ್ಲಿ ತೋರಿದ ಅಚಲವಾದ ನಂಬಿಕೆ ಇಂದು ಅಳಿಯದೆ ಬಾಗದೆ ಸ್ಥಿರವಾಗಿದೆ. ಜಿಮ್ ವಾಲ್ವನೋ ಅವರ ಪ್ರಸಿದ್ದ ಮಾತುತಂದೆ ತನ್ನ ಮಕ್ಕಳಿಗೆ ಕೊಡುವ ದೊಡ್ಡ ಕೊಡುಗೆಯೆಂದರೆ  ತನ್ನ ಮಕ್ಕಳಲ್ಲಿ ತೋರಿಸುವ ಅಚಲವಾದ ನಂಬಿಕೆ ”. ಅದು ಮಾನವ ಅಸ್ತಿತ್ವದ ಪ್ರಮುಖ ಅಂಶವಾಗಿದೆ.  

ತಂದೆಯಂದಿರ ದಿನ ನಮಗೆ ಸ್ಮರಣೀಯ ದಿನಗಳಲ್ಲಿ ಒಂದು. ಆದರೆ ನಾವೆಲ್ಲರೂ ಅದನ್ನು ಒಂದು ದಿನ ಆಚರಿಸಿದರೆ ಸಾಲದು ಎಂದು ನೆನಪಿಟ್ಟುಕೊಳ್ಳಬೇಕು. ನಾವು ಜೀವನದುದ್ದಕ್ಕೂ ಅವರ ಜೀವನದ ಬಗ್ಗೆ ಕಾಳಜಿ , ಗೌರವ, ಮತ್ತು ಪ್ರೀತಿಯನ್ನು ಹೊಂದಿರಬೇಕು. ನಮಗೆ ನೀಡಿದ ಅಪಾರ ತ್ಯಾಗಗಳನ್ನು ಮರೆಯದೆ ಪ್ರೀತಿ, ಸಹನೆಯಿಂದ ಬದುಕಬೇಕು. ಯಾರೋ  ಹೇಳಿದ ಮಾತು ಕೇಳಿ ಹೆತ್ತವರನ್ನು ಹೀಯಾಲಿಸಬಾರದು.ನಮ್ಮ ಜನ್ಮದ ವೇಳೆ ಯಾವ ರೀತಿ ನಮ್ಮನ್ನು ತೋಳುಗಳಿಂದ ತಬ್ಬಿಕೊಳ್ಳುತಿದ್ದರೊ ಅದೇ ರೀತಿ ಅವರ ಹಿರಿ ತನದಲ್ಲಿ ಅವರಿಗೆ ಆಸರೆಯಾಗಿ ಅವರ ಆಶಿರ್ವಾದದಿಂದ ಉತ್ತಮ ಜೀವನ ನಡೆಸೋಣ.




Author

David East - Author
Thanseef Anajur
Student @ Darunnoor Kashipatna

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.