ವಿದ್ಯಾಸಂಸ್ಥೆಗನ್ನು ತೆರೆಯಲು ಅನುಮತಿ ನೀಡುವಿರೇ!....

 

Permission to open an educational institution in kannada

ವಿಶ್ವವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ ಕರೋನ ವೈರಸ್ ತಡೆಗಟ್ಟುವ ಸಲುವಾಗಿ ಇಂದು ಹಲವೆಡೆ ಲಾಕ್ಡೌನ್ ಘೋಷಿಸಿ ಲಾಕ್ಡೌನ್ ಸಡಿಲಿಕೆಯೂ ಪ್ರಾರಂಭವಾಗಿದೆ.ಅರ್ಧ ದಿನ ಮಾತ್ರ ತೆರೆದಿಟ್ಟರೆ ಸಂಪೂರ್ಣವಾಗಿ ಕೋರೋಣ ರೋಗ ಇಲ್ಲವಾಗುತ್ತದೆಯೇ?ಪರಿಸ್ಥಿತಿ ಕೈ ಮೀರುವ ಲಕ್ಷಣ ಎದ್ದು ಕಾಣುತ್ತಿದೆ. ಕೊರೋನ ಭೀತಿಯಿಂದ  ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂಬುವುದು ಶೋಚನೀಯ.

ಲಾಕ್ಡೌನ್ ಕಾರಣವಾಗಿ ಜೀವನ ಸಾಗಿಸಲು  ಪರದಾಟ ನಡೆಸುವವರ ಸಂಕಷ್ಟಗಳನ್ನು ಕೇಳುವವರ್ಯಾರು. ಅಧ್ಯಾಪಕರು, ದಿನಗೂಲಿ ಕಾರ್ಮಿಕರು ಹಾಗೂ ಚಾಲಕ ಮತ್ತು ನಿರ್ವಾಹಕರ ಬವಣೆಯನ್ನು ಕೇಳುವವರಿಲ್ಲ. ಅದಲ್ಲದೆ ಕೊರೊನಾ ನಿಯಂತ್ರಣಕ್ಕಾಗಿ ದಿನದ ಅರ್ಧದಷ್ಟು ಮಾತ್ರ ಲಾಕ್ಡೌನ್ ಮಾಡಿ ಪೇಟೆಗಳಲ್ಲಿ ಜನಜಂಗುಳಿ ಸೇರುವಂತಾಗಿದೆ.

ಇದು ಕೊರೋನಾ ವೈರಸ್ ಇನ್ನಷ್ಟು ಹರಡಲು ಕಾರಣವಾಗಿದೆ. ಇದೇ ಸಂದರ್ಭದಲ್ಲಿ ಆನ್ಲೈನ್ ಮೂಲಕ ವಿದ್ಯಾಭ್ಯಾಸಕ್ಕೆ ಕುಳಿತಿರುವ ವಿದ್ಯಾರ್ಥಿಗಳು, ಕೆಲವು ಬಡ ಕುಟುಂಬ ದಲ್ಲಿರುವ ವಿದ್ಯಾರ್ಥಿಗಳು ಸ್ವತಃ ಮೊಬೈಲ್ ಇಲ್ಲದೆ ತರಗತಿಗಳಿಗೆ ಸರಿಯಾಗಿ ಹಾಜರು ಪಡೆಯಲಾಗದಂತಹ ಸನ್ನಿವೇಶ ಎದುರಾಗಿದೆ.ಆದುದರಿಂದ ವಿದ್ಯಾರ್ಥಿಗಳು ತಮ್ಮ ತರಗತಿಗಳನ್ನು ಆನ್ಲೈನ್ ಮೂಲಕ ಪಡೆಯಲು ನೆಟ್ವರ್ಕ್ ಸಮಸ್ಯೆಯೂ ತಡೆಯಾಗುತ್ತಿದೆ.

ಈ ರೀತಿಯ ಅಡೆ ತಡೆಗಳು ಪರೀಕ್ಷೆಗಳಿಗೆ ತೊಂದರೆಯಾಗುತ್ತದೆ. ತ್ರೈಮಾಸಿಕ ಲಾಕ್ಡೌನ್ ಘೋಷಿಸಿ ಎಸೆಸೆಲ್ಸಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ತಕ್ಷಣ ಪರೀಕ್ಷೆ ವಿಷಯವನ್ನು ಕೇಳಿ ನಿಬ್ಬೆರಗಾಗಿದ್ದಾರೆ. ತಾವು ಕಷ್ಟಪಟ್ಟು ಕಲಿತಂತಹ ಪಾಠ ಅಭ್ಯಾಸಗಳು ಮರೆಯಲು ಕಾರಣವಾಗಿದೆ. ಇಂದಿನ ವಿದ್ಯಾರ್ಥಿಗಳು ನಾಳೆಯ ನೇತಾರರು. ಆದುದರಿಂದ ವಿದ್ಯಾರ್ಥಿಗಳಿಗೆ ವಿದ್ಯಾಸಂಸ್ಥೆಗಳನ್ನು ತೆರೆದು ವಿದ್ಯಾರ್ಥಿಗಳಿಗೆ ಕಲಿಕೆಗೆ ಅವಕಾಶ ನೀಡಿ.ಶಿಕ್ಷಣ ಅಗತ್ಯ ಸೇವೆಗಳ ಪಟ್ಟಿಯಲ್ಲಿ ಸೇರಿಸಲು ಅಧಿಕಾರಿಗಳು ಹಿಂದೇಟು ಹಾಕುವುದಾದರೂ ಯಾಕೆ?

 

This is the Author section

-- Author --

profile-sample1 yasir marodi

Aslam Salmara Student @ Darunnoor Kashipatna

ಕಾಮೆಂಟ್‌‌ ಪೋಸ್ಟ್‌ ಮಾಡಿ

5 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.