ಪ್ರಜಾಪ್ರಭುತ್ವ: ನಿಮಗೆಷ್ಟು ಗೊತ್ತು?



ಪ್ರಾಮಾಣಿಕ ಜಗತ್ತಿನಲ್ಲಿ ಅನೇಕ ರಾಷ್ಟ್ರಗಳ ಸರ್ಕಾರಗಳು ಪ್ರಜಾಪ್ರಭುತ್ವದ ಆಧಾರದ ಮೇಲೆ ರೂಪಿತವಾಗಿದೆ. ಆದುದರಿಂದ ಇಂದಿನ ಸುವರ್ಣವಾದ ಯುಗವನ್ನು ಪ್ರಜಾಪ್ರಭುತ್ವ ಯುಗ  ಎಂದು ಕರೆಯಲಾಗುತ್ತದೆ.

ಜಗತ್ತಿಗೆ ಪ್ರೀತಿ, ದಯೆ, ಕರುಣೆಯ ಸಂದೇಶವನ್ನು ಸಾರಿದ ಅಮೇರಿಕದ ನಾಯಕ ಅಬ್ರಾಹಂ ಲಿಂಕನ್ ಳುತ್ತಾರೆ. ಜನರ, ಜನರಿಂದ ಮತ್ತು ಜನಕ್ಕೋಸ್ಕರ ನಡೆಯುವ ಸರ್ಕಾರವೇ ಪ್ರಜಾಪ್ರಭುತ್ವ.  ಮೂಲ ಭಾಷೆಯಲ್ಲಿ ಹೇಳುವುದಾದರೆ, “DEMOCRACY IS GOVERNMENT OF PEOPLE, BY THE PEOPLE, AND FOR THE PEOPLE” ಎಂದಾಗಿದೆ. ನಾವು ದೈನಂದಿನ ಪ್ರಜಾಪ್ರಭುತ್ವ ಎಂಬ ವಾಕ್ಯವನ್ನು ಬಳಸುತ್ತಿರುತ್ತೇವೆ. ಆದರೆ ಪದದ ನಿಜವಾದ ವ್ಯಾಖ್ಯಾನವೇನೆಂದು ನಾವು ತಿಳಿದಿಲ್ಲ ಪ್ರಜಾಪ್ರಭುತ್ವವೆಂದರೆ ದೇಶದ ಪ್ರಜೆಗಳಿಗಿರುವ ಸರ್ಕಾರವೇ ಪ್ರಜಾಪ್ರಭುತ್ವ, ಜನರ ಅಧಿಕಾರಗಳೇ ಪ್ರಜಾಪ್ರಭುತ್ವ. ಪ್ರಾಚೀನ ಕಾಲದ ತತ್ವಜ್ಞಾನಿಗಳು ಪ್ರಜಾಪ್ರಭುತ್ವ ಎಂಬ ವಿಷಯದ ಕುರಿತು ಹಲವಾರು ವಿಷಯಗಳನ್ನು ಹೇಳಿದ್ದಾರೆ.

ಭಾರತ ದೇಶವು ಇಡೀ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಜಗತ್ತಿನಲ್ಲಿಯೇ ಯಾವ ರಾಷ್ಟ್ರ ಪ್ರಜಾಪ್ರಭುತ್ವವೋ ರಾಷ್ಟ್ರ ಇಡೀ ಜಗತ್ತಿನಲ್ಲೇ ಗೆದ್ದಂತಹ ರಾಷ್ಟ್ರವಾಗಿದೆ. ಪ್ರಜಾಪ್ರಭುತ್ವವನ್ನು ಪ್ರಥಮವಾಗಿ ಸ್ಥಾಪಿಸಿದ್ದು ಇಂಗ್ಲೆಂಡ್ ನಲ್ಲಿಯಾಗಿದೆ. ಜನರ ಮೇಲೆ ಅತೀ ಹೆಚ್ಚಾಗಿ ದಬ್ಬಾಳಿಕೆ ನಡೆಸುತ್ತಿದ್ದ ಇಂಗ್ಲೆಂಡಿನ ದೊರೆ ಮೊದಲನೇ  ಚಾರ್ಲ್ಸ್ ವಿರುದ್ದವಾಗಿ ದಂಗೆಯನ್ನು ನಡೆಸಿ ಆತನನ್ನು ಶಿರಚ್ಛೇದನ ಮಾಡಲಾಯಿತು. ಹಾಗೂ ಎರಡನೇ ಜೇಮ್ಸ್ ನನ್ನು ಅಧಿಕಾರದಿಂದ ಉರುಳಿಸಿ ಪ್ರಜಾಪ್ರಭುತ್ವದ ಸಿದ್ದಾಂತವನ್ನು ಎತ್ತಿಹಿಡಿದರು. ಇಂಗ್ಲೆಂಡ್ ತೋರಿಸಿದ ಹಾದಿಯನ್ನು ಅನುಸರಿಸಿ ಬೇರೆ ಯೋರೋಪ್ ರಾಜ್ಯದಲ್ಲೂ ಪ್ರಜಾಪ್ರಭುತ್ವ ಸ್ಥಾಪಿಸಲಾಯಿತು.

ಪ್ರಜಾಪ್ರಭುತ್ವದ ಅರ್ಥವೇನು?

ಪ್ರಜಾಪ್ರಭುತ್ವ ಎಂಬ ಕನ್ನಡ ಪದದ ಇಂಗ್ಲೀಷ್ ಅನುವಾದವೆಡೆಮಕ್ರಸಿ”. ಇದು ಗ್ರೀಕ್ ಭಾಷೆಯಡೆಮೋಸ್ಮತ್ತುಕ್ರಾಟಿಯಎಂಬ ಎರಡು ಪದಗಳಿಂದ ಬಂದದ್ದಾಗಿದೆ. “ಡೇಮೋಸ್ಎಂದರೆ ಜನತೆ ಹಾಗೂಕ್ರಾಟಿಯಾಎಂದರೆ ಶಕ್ತಿ ಅಥವಾ ಅಧಿಕಾರ ಎಂದಾಗಿದೆ.

ಪ್ರಜಾಪ್ರಭುತ್ವದ ಮೂಲ ತತ್ವಗಳೇನು?

ಪ್ರಜಾಪ್ರಭುತ್ವದ ಮೂಲ ತತ್ವಗಳೇನೆಂದರೆ:

ಪ್ರಜಾಪ್ರಭುತ್ವವು ಎಲ್ಲಾ ಜನರ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸರ್ಕಾರದ ನೀತಿ, ನಿಯಮ ಹಾಗೂ ಕಾನೂನುಗಳ ಹಕ್ಕನ್ನು ಹೊಂದಿದೆ. ಪ್ರಜಾಪ್ರಭುತ್ವವು ಸ್ವಾತಂತ್ರ್ಯ, ಸಮಾನತೆ, ಸೌಹಾರ್ದತೆ ಹಾಗೂ ರಾಷ್ಟ್ರರಕ್ಷಣೆ ಎಂಬ ತತ್ವವನ್ನು ಹೊಂದಿದೆ. ಪ್ರಜಾಪ್ರಭುತ್ವ ಯುವಕರು ಅಥವಾ ವಯಸ್ಸಿನ ಜನರಿಗೆ ಬೇದಭಾವ ಮಾಡದೆ ನ್ಯಾಯವನ್ನು ಕೊಡುತ್ತದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಕೈಯಲ್ಲಿಯೇ ರಾಜ್ಯದ ಅಧಿಕಾರ ಅಥವಾ ಬಲ ಇರುತ್ತದೆ. ಸಂವಿಧಾನ ಮೇಲೆ ಪ್ರಮಾನ ವಚನ ಮಾಡಿದ ರಾಜಕರಣಿಗಳಿಂದಲೇ ಪ್ರಜಾಪ್ರಭುತ್ವವೂ ದುರ್ಬಳಕೆಯಾಗುತ್ತಿದೆ. ಪ್ರಜಾಪ್ರಭುತ್ವ ಎಂಬ ಪದ ಕೇವಲ ಕಾಗದದ ಮೇಲೆ ಉಳಿದಂತಿವೆ. ಅದನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.





Author

David East - Author
Irfan Vittal
Student @ Darunnoor Kashipatna

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.