ಗಾಂಧಿ ಕೊಲೆಯ ತನಿಖೆ ಮರು ನಡೆಯಬೇಕೇ?



ಸತ್ಯ, ಅಹಿಂಸೆಯ ಸಿದ್ದಾಂತದ  ಮೂಲಕ ಇಡೀ ದೇಶವನ್ನೇ ಭೋಧಿಸಿದ ರಾಷ್ಟ್ರ ಪಿತ ಮಹಾತ್ಮ ಗಾಂಧಿ ಹತ್ಯೆಯಾಗಿ ಹಲವು ದಶಕಗಳೇ ಕಳೆದಿದ್ದರೂ ಮರು ತನಿಖೆಯಾಕಾಗಬೇಕಾಗಿದೆ. ಹತ್ಯೆ ಹಿಂದಿನ ರಹಸ್ಯ ಇಂದಿಗೂ ಬಯಲಾಗಿಲ್ಲ. ಹತ್ಯೆ ನಂತರ ನಡೆದ ತನಿಖೆಯಲ್ಲಿ ಯಾರನ್ನು ರಕ್ಷಿಸಲಾಗಿತ್ತು..? ಹತ್ಯೆಯ ಮರು ತನಿಖೆಯಾದರೆ. ಸತ್ಯ ಹೊರ ಬರುತ್ತಾ? ನಾಥೂರಾಮ್ ಘೋಡ್ಸೆ ಎಂಬ ಹಿಂದುತ್ವವಾದಿ ಗಾಂಧಿಯನ್ನು ಹತ್ಯೆ ಮಾಡಿದ ಎಂದು ಇತಿಹಾಸ ಹೇಳುತ್ತೆ. ಆದರೆ ಕೆಲವು ವಾಸ್ತವಾಂಶಗಳು ಇತಿಹಾಸದ ಮತ್ತೊಂದು ಮುಖವನ್ನು ಅನಾವರಣಗೊಳಿಸುತ್ತಿದೆ. ಮಹಾತ್ಮಾ ಗಾಂಧೀಜಿ ಹತ್ಯೆಯಾಗಿ 70 ವರ್ಷಗಳಾಗುತ್ತಿವೆ. ಆದರೂ ಹತ್ಯೆಯ ಹಿಂದಿನ ಪೂರ್ಣ ಸತ್ಯ ಇದುವರೆಗೂ ದೇಶದ ಜನರಿಗೆ ಇದುವರೆಗೂ ಗೊತ್ತೇ ಇಲ್ಲ. ಈಗ ಗಾಂಧಿ ಹತ್ಯೆ ಪ್ರಕರಣದ ಮರುತತನಿಖೆಯಾಗಬೇಕಾಗಿದೆ.

1948 ಜನವರಿ 30 ರಂದು ಬಿರ್ಲಾ ಹೌಸ್ ಆವರಣದಲ್ಲಿ ಗಾಂದಿಯವರು ಪೂಜೆಗೆಂದು ಹೊರಟಾಗ ಕಣ್ಣೆದುರಲ್ಲಿಯೇ ಪುಣ್ಯ  ಎದೆಗೆ ನಾಥೂರಾಮ ಘೋಡ್ಸೆ ಗುಂಡಿಕ್ಕಿದ. ಅಹಿಂಸೆಯ ತತ್ವಾದರ್ಶಗಳ ಪಾಠ ಕಲಿಸಿದ  ಪ್ರಾಣ ಪಕ್ಷಿಯೂ ಹಾರಿ ಹೋಗಿದ್ದರಿಂದ.  ಇಡೀ ದೇಶ ದುಃಖ ದಿಂದಾವರಿಸಿತು. ಮಾದ್ಯಮಗಳಲ್ಲಿ ಗಾಂಧಿ ಕೊಲ್ಲಲ್ಪಟ್ಟಿದ್ದಾರೆ, ಕೊಂದವನು ಒಬ್ಬ ಹಿಂದೂ ಎಂಬ ವಾರ್ತೆಯೂ ಪಸರಿಸಿತು. ಒಂದು ವೇಳೆ ಕೊಲೆಗುಡುಕ ಮೂಸಲ್ಮಾನನಾಗಿದ್ದರೆ  ಇಡೀ ದೇಶವೇ ಹಿಂದೆಂದೂ ಕಾಣದ ಮಾರಣಹೋಮವೂ ಎದುರಿಸಬೇಕಾಗಿತ್ತು

ಗಾಂಧಿಯನ್ನು ಕೊಲೆಗೆ ನಾಥೂ ನಾಮ್ ಘೋಡ್ಸೆ ಬಳಸಿದ  ಬೆರೆಟ್ಟಾ ಪಿಸ್ತೂಲ್ನಿಂದ ಹಾರಿದ್ದು ಮೂರು ಗುಂಡು. ಘೋಡ್ಸೆ ಪಿಸ್ತೂಲ್ನಲ್ಲಿದ್ದ ಏಳು ಗುಂಡುಗಳಲ್ಲಿ ಮೂರು ಗಾಂಧಿ ದೇಹ ಹೊಕ್ಕಿದ್ದವು. ಉಳಿದ ನಾಲ್ಕು ಗುಂಡುಗಳು ಪಿಸ್ತೂಲ್ನಲ್ಲೇ ಉಳಿದಿತ್ತು. ಆದರೆ ಗಾಂಧೀಜಿ ದೇಹದಲ್ಲಿ ಪತ್ತೆಯಾಗಿದ್ದು ಮಾತ್ರ ನಾಲ್ಕು ಗುಂಡುಗಳು. ಹಾಗಾದರೆ ನಾಲ್ಕನೇ ಗುಂಡು ಹಾರಿಸಿದ್ದು ಯಾರು..? ಅನುಮಾನ ಗಾಂಧಿ ಹತ್ಯೆಯಾದಾಗಿನಿಂದಲೂ ಜೀವಂತವಾಗಿದೆ ಆದರೆ ಇದಕ್ಕೆ ದೊಡ್ಡ ಮಟ್ಟದ  ಕಾನೂನಿನ ಬೆಂಬಲ ಸಿಗದೇ ಹೋದ ಕಾರಣದಿಂದ ವಾದಕ್ಕೆ ಯಾವುದೇ ಮಹತ್ವ ಬರಲೇ ಇಲ್ಲ. ಗಾಂಧೀಜಿಯವರ ಪಾರ್ಥೀರ್ವ ಶರೀರದ ಮರಣೋತ್ತರ ಪರೀಕ್ಷೆಯನ್ನು ನಡೆಸಲಿಲ್ಲ. ಕೊಲೆಯ ಹಿಂದೆ ಹಿಂದುತ್ವವಾದಿಗಳು ಬ್ರಿಟೀಷರ ಸಹಾಯವನ್ನು ಪಡೆದಿದ್ದಾರೆಂಬ ವಾಸ್ತವಾಂಶ ಇಲ್ಲಿದೆ. ಎರಡನೇ ಮಹಾಯುದ್ದದ ಅವಧಿಯಲ್ಲಿ ಬ್ರಿಟೀಷ್ ಸೇನೆಯ ವಿದ್ವಂಸಕಾರಿ ಘಟಕವಾಗಿದ್ದ ಫೋರ್ಸ್ 136   ಸಹಾಯವಿತ್ತು. ಯಾಕೆಂದರೆ ಗಾಂಧಿ ಹತ್ಯೆಗೆ ಬಳಸಲಾಗಿದ್ದ ಬೆರೆಟ್ಟಾ 1934 ಪಿಸ್ತೂಲ್ ಅನ್ನು ಎರಡನೇ ಮಹಾಯುದ್ಧದಲ್ಲಿ ಬಳಕೆ ಮಾಡಲಾಗಿತ್ತು. ಜನ ಸಾಮಾನ್ಯರಿಗೆ ಅಷ್ಟು ಸುಲಭವಾಗಿ ಸಿಗದ ಪಿಸ್ತೂಲ್ ಗೋಡ್ಸೆಗೆ  ಹೇಗೆ ಸಿಕ್ಕಿತ್ತು  ..? ಕೊಲೆಯಾಗುವ 3:00 ಗಂಟೆಯ ಮೊದಲು ದೆಹಲಿಯಲ್ಲಿ ವಿದೇಶಿ ವ್ಯಕ್ತಿ ಗಾಂದೀಜಿ ಮರಣ ಹೊಂದಿದ್ದಾರೆಂಬ ಕರಪತ್ರವನ್ನು ಹಂಚಿದ್ದ. ಅದೇ ರೀತಿ ಕೊಲೆಯಾಗುವ ಮೂರು ದಿನ ಮುಂಚೆ ಪುಣೆಯ ಕಲೆಕ್ಟರ್ ರವರ ಪತ್ನಿ ಸಾರಲ ಭಾವೆ "ಗಾಂದೀಜಿಯವರನ್ನು ಕೊಲ್ಲಲು ಕೆಲವರು ದೆಹಲಿಗೆ ಹೋಗಿದ್ದಾರೆ" ಎಂದು ಹೇಳಿದ್ಧರು. ಇದು ಪುಣೆಯ ಪೋಲೀಸರಿಗೆ ಗೊತ್ತಿದ್ದರೂ ಹತ್ಯೆಯನ್ನೇಕೆ ತಡೆಯಲಿಲ್ಲ. ದೇಶ ವಿಭಜನೆಯ ಸಂದರ್ಭದಲ್ಲಿ ಕೊಮುವಾದದಿಂದ ಗಲಭೆಗಳಿಂದ ಮುಲುಗಿದ್ದ ಸಂದರ್ಭದಲ್ಲಿ ಅವಿಭಾಜ್ಯ ಬಂಗಾಳದಲ್ಲಿ ಮುಸಲ್ಮಾನರಿಗೆ ಶಾಂತಿಯ ಮಂತ್ರ ವನ್ನು ಜಪಿಸುತ್ತಾ ರಕ್ಷಣೆ ಒದಗಿಸಿದರು. ನವಖಾಲಿಯಲ್ಲಿ ಸಾಂತ್ವನ ಹೇಳುತ್ತಾ, ಯಾವುದೇ ಅಂಗ ರಕ್ಷಕರಿಲ್ಲದೆ  ಪಾಕಿಸ್ತಾನದಿಂದ ಬಂದ ನಿರಾಶ್ರಿತ ಹಿಂದೂಗಳು ಕಾಲಿಯಿರುವ ಮಸೀದಿಯಲ್ಲಿ ತಂಗಿದ್ದರು. ಅದನ್ನು ಕಾಲಿ ಮಾಡಿ ಮುಸಲ್ಮಾನರಿಗೆ ಬಿಟ್ಟು ಕೊಡಲು ಗಾಂಧಿ ಹೇಳಿದ್ದರು. ನವಖಾಲಿಯಲ್ಲಿ  ಗಲಭೆಯ ವೇಳೆ ಯಾವುದೇ ಅಂಗ ರಕ್ಷಕರಿಲ್ಲದೆ ಅರೆ ನಗ್ನ ಫಕೀರನಾದ ಗಾಂಧೀಜಿಯವರು ಶಾಂತಿಯನ್ನು ನೆಲೆಸಿ, ಒನ್ ಮ್ಯಾನ್ ಆರ್ಮಿ ಆಫ್ ಪೀಸ್ ಎಂದೇ ಖ್ಯಾತರಾದರು. ಕಾರಣದಿಂದಾಗಿ ಗಾಂಧೀಯವರು ಮುಸ್ಲಿಂ ವಾದಿ, ಹಿಂದೂಗಳ ಬಗ್ಗೆ ಅವರಿಗೆ ಗೌರವವಿಲ್ಲವೆಂದು ಹೇಳಿ ಕೊಲ್ಲುವ ಪ್ರಯತ್ನವನ್ನು ಮಾಡಿದರು. ಇದು ನಿಜವಾಗಿದ್ದರೆ, ಕೊನೆಯುಸಿರೆಳೆಯುವ ಸಂದರ್ಭ ಹೇ ರಾಮ್ ಹೇ ರಾಮ್ ಎಂದೇ ಜಪಿಸುತ್ತಾ ರಾಮನ ನೈಜ ಭಕ್ತನಾಗಿ ಮರಣ ಹೊಂದಿದರು.
ಪ್ರಸ್ತುತ ಸನ್ನಿವೇಶದಲ್ಲಿ ಗಾಂಧೀಜಿಯವರನ್ನು ಹಿಯಾಲಿಸುತ್ತಾ  ಗಾಂಧಿ ಮೂರ್ತಿಗಳಿಗೆ ಹಾನಿ ಮಾಡಿ ಪಾಕಿಸ್ತಾನ್ ರಾಷ್ಟ್ರ ಪಿತ ಎಂಬ ಹಣೆಪಟ್ಟಿಯನ್ನು ಕಟ್ಟಿ, ಕೊಲೆಗಡುಕ ಗೋಡ್ಸೆಯನ್ನು ಸ್ವಾತಂತ್ರೋತ್ತರ ಭಾರತದ ಅಪ್ರತಿಮ ದೇಶಭಕ್ತ ಎಂದು ಹೇಳಿದರು. ಅದೇ ರೀತಿ ಗಾಂಧಿಯವರ ಕನ್ನಡಕವನ್ನು ಸ್ವಚ್ಛತಾ ಅಭಿಯಾನಕ್ಕೆ ಮಿತಗೊಳಿಸಿದರು.

ಗಾಂಧಿ ಕಲಿಸಿಕೊಟ್ಟ ಅಹಿಂಸೆಯ ಅಸ್ತ್ರದಿಂದ ಸತ್ಯದ ಪರ ಹೋರಾಡೋಣ. ಸಂತ್ಯ ಇರುವೆಡೆಗೆ ಗಾಂಧಿ ಎಂದಿಗೂ ಜೀವಂತವಿದ್ದಾರೆ. ಸಾರ್ವಕಾಲಕ್ಕೂ ಸತ್ಯವಾಗಿರುವ ಅವರ ಬದುಕು, ತತ್ವಾದರ್ಶಗಳ ಬಗ್ಗೆ ತಿಳಿದು ಜೀವನದಲ್ಲೂ ಬಾಪೂಜಿಯ ಆದರ್ಶಗಳನ್ನು ಅಚ್ಚಳಿಯದೆ ಅಳವಡಿಸಿಕೊಳ್ಳೋಣ.



Author

David East - Author
Fayiz Piligoodu
Student @ Darunnoor Kashipatna

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.