ಜನಮನಗಳಲ್ಲಿ ಅಪಾರವಾದ ಪಾಂಡಿತ್ಯ ಹಾಗೂ ಉತ್ತಮ ವ್ಯಕ್ತಿತ್ವದೊಂದಿಗೆ ಪ್ರಭಾವ ಬೀರಿದ ಮಹಾನ್ ವ್ಯಕ್ತಿ. ಜನನ ಕೇರಳದಲ್ಲಾದರೂ ಜೀವನದ ಸಿಂಹ ಭಾಗವೂ ಶಿಕ್ಷಣ ಹಾಗೂ ಕರ್ಮ ಭೂಮಿಗಾಗಿ ವಿದೇಶದಲ್ಲಿ ಕಳೆದರು. ತಮ್ಮ ಅಪಾರವಾದ ಪಾಂಡಿತ್ಯ ಸಾಮಾಜಿಕ ಹಾಗೂ ಶೈಕ್ಷಣಿಕ ರಂಗದಲ್ಲಿ ಕೊಡುಗೆಗಳನ್ನು ನೀಡಿದೆ.
ಸಮಸ್ತ ಕೇರಳ ಜಂ- ಇಯ್ಯತ್ತುಲ್ ಉಲಮಾ ಇದರ ಕೇಂದ್ರ ಮುಶಾವರ ಸದಸ್ಯರೂ, ಮುಸ್ಲಿಂ ಸಮುದಾಯದ ಆಶಾಕಿರಣವೂ ಆದ ಶೈಖುನಾ ತ್ವಾಖಾ ಉಸ್ತಾದರು 1949 ಆಗಸ್ಟ್ 10 ರಂದು ಚೆಂಬರಿಕ್ಕ ಎಂಬಲ್ಲಿ ಖಾಝಿಯಾರಗತ್ತ್ ಮುಹಮ್ಮದ್ ಕುಂಞಿ ಹಾಜಿ, ಹಾಗೂ ಆಯಿಶಾ ಹಜ್ಜುಮ್ಮಾ ದಂಪತಿಯ ಪುತ್ರನಾಗಿ ಜನ್ಮ ತಾಳಿದರು.
ಶೈಖುನಾರವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ್ಥಳೀಯ ತಳಂಗರ ಮುಸ್ಲಿಂ ಹೈಸ್ಕೂಲ್ ನಿಂದ ಪಡೆದರು. ಬಳಿಕ ಪಡನ್ನ ಮಾವಿಲಾ, ಕಡಪ್ಪುರಂ, ಪೆರಿಙ್ಙತ್ತೂರ್, ಬೇವಿಂಜ, ಕೊಡುಂಗಲ್ಲೂರು, ಆಝಿಕ್ಕೋಡು ಅಲ್ ಇರ್ಷಾದ್ ಕಾಲೇಜು ಮತ್ತು ಪೊನ್ನಾನಿ ಮಊನತುಲ್ ಇಸ್ಲಾಂ ದರ್ಸ್ ಗಳಿಂದ ಧಾರ್ಮಿಕ ವಿದ್ಯಾಭ್ಯಾಸವನ್ನು ಪಡೆದರು. ಬಳಿಕ ಉನ್ನತ ವಿದ್ಯಾಭ್ಯಾಸಕ್ಕಾಗಿ ಜಗತ್ಪ್ರಸಿದ್ಧ ಖೈರೋ ಅಲ್- ಅಝ್ಹರ್ ವಿಶ್ವ ವಿದ್ಯಾಲಯಕ್ಕೆ ತೆರಳಿ ಕುಲ್ಲಿಯಾ ಶರೀಆಃ ವಲ್ ಖಾನೂನ್ ವಿಭಾಗದಿಂದ ಉಸೂಲುಲ್ ಫಿಕ್ಙ್ ನಲ್ಲಿ ಎಂ.ಎ ಬಿರುದು ಪೂರ್ತಿಗೊಳಿಸಿದರು. ದಯೂಬಂದಿನಲ್ಲಿರುವ ದಾರುಲ್ ಉಲೂಮಿನಿಂದ ದೌರಾ ಹದೀಸಿನಲ್ಲಿ ಬಿರದು ಮತ್ತು ತಫ್ಸೀರ್, ಅದಬ್, ಮಅಕೂಲಾತ್, ಎಂಬಿವುಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದು ಕೊಂಡರು.
ಇವರ ಶೈಕ್ಷಣಿಕ ಹಂತಗಳು ಪೂರ್ಣಗಳಿಸಿದ ಬಳಿಕ ಒಮಾನಿನ ಸಲಾಲದ ತ್ವಾಖಾ ಎಂಬಲ್ಲಿ ಸುಲ್ತಾನ್ ಖಾಬೂಸ್ ರಾಜರ ತಾಯಿ ಸಯ್ಯಿದಾ ಮೈಸು ಅವರ ತಾಯಿಯ ನಾಮದಲ್ಲಿ ಸ್ಥಾಪಿಸಲ್ಪಟ್ಟ ಜಾಮಿಅಃ ಶೈಖತ್ತು ಸಲ್ಮಾ ಮಸೀದಿಯಲ್ಲಿ ಸುಮಾರು ಮೂರು ದಶಕಗಳ ಕಾಲ ಖತೀಬ್ ಹಾಗೂ ಮುದರ್ರಿಸರಾಗಿ ಸೇವೆ ಸಲ್ಲಿಸಿದರು. ವಿದೇಶದಿಂದ ಉರಿಗೆ ಮರಳಿದ ಬಳಿಕ ದಕ್ಷಿಣ ಭಾರತದ ಅತ್ಯುನ್ನತ ದೀನಿ ಜ್ಞಾನ ನೌಕೆ ಸಮಸ್ತ ಕೇರಳ ಜಂ- ಇಯ್ಯತ್ತುಲ್ ಉಲಮಾ ಇದರ ಕೇಂದ್ರ ಮುಶಾವರ ಸದಸ್ಯರಾಗಿ ಆಯ್ಕೆಗೊಂಡರು.
ಸಿ.ಎಂ ಅಬ್ದುಲ್ಲಾ ಮುಸ್ಲಿಯಾರ್ ರವರ ಮರಣದ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಪಟ್ಟಕ್ಕೆ ಶೈಖುನಾ ತ್ವಾಖಾ ಉಸ್ತಾದರು ಅರ್ಹರಾದರು. ಪ್ರಸ್ತುತ ದ.ಕ ಸಹಿತ ಉಡುಪಿ, ಕಿಝೂರು ಸಂಯುಕ್ತ ಜಮಾಆತ್ ಹಾಗೂ ಇನ್ನೂರಕ್ಕೂ ಹೆಚ್ಚು ಮೊಹಲ್ಲಾಗಳ ಖಾಝಿಗಳಾಗಿ ಸೇವೆಸಲ್ಲಿಸುತ್ತಿದ್ದಾರೆ. ಮಂಗಳೂರಿನ ಜಲಾಲುದ್ದೀನ್ ಮುಹಮ್ಮದ್ ಮೌಲಾ ಹಿಫ್ಲುಲ್ ಖುರ್ಆನ್ ಸಂಸ್ಥೆಯ ಪ್ರಾಂಶುಪಾಲರಾಗಿಯೂ ದಾರುನ್ನೂರ್ ಎಜುಕೇಶನ್ ಸೆಂಟರ್ ಕಾಶಿಪಟ್ನ ಇದರ ಅಧ್ಯಕ್ಷರಾಗಿಯೂ ಸೇವೆಸಲ್ಲಿಸುತ್ತಿದ್ದಾರೆ.
ಅಸ್ಲಂ ಸಾಲ್ಮರ